ಟೋಕಿಯೊ, ಮಾ 24 (DaijiworldNews/SM): ಕೊರೊನಾ ಜಾಗತಿಕ ಸಾಂಕ್ರಾಮಿಕ ರೋಗವಾಗಿಬದಲಾಗಿದೆ. ಈ ವೈರಸ್ ಭೀತಿ ಹಾಗೂ ಜಾಗತಿಕ ಒತ್ತಡದಿಂದಾಗಿ, ಜಪಾನ್ ನಡೆಸಬೇಕಿದ್ದ ಟೋಕಿಯೊ ಒಲಿಂಪಿಕ್ಸ್ ಮುಂದೂಡಲು ನಿರ್ಧರಿಸಿದ್ದು, 2021 ರಲ್ಲಿ ನಡೆಸಲು ನಿರ್ಧರಿಸಿದೆ.
ಈ ವರ್ಷ ಜುಲೈ 24 ರಿಂದ ಆಗಸ್ಟ್ 9 ರವರೆಗೆ ಟೋಕಿಯೊ ಒಲಿಂಪಿಕ್ಸ್ ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ಪ್ರಪಂಚವನ್ನು ವ್ಯಾಪಿಸಿರುವ ಭೀತಿಯನ್ನು ಗಮನದಲ್ಲಿಡಲಾಗಿದೆ. ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಚರ್ಚೆ ನಡೆಸಿದ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟ ಮುಂದೂಡಲು ನಿರ್ಧಾರಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಆಧಾರದ ಮೇಲೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅಥ್ಲಿಟಿಕ್ ಮತ್ತಿತರರ ಆರೋಗ್ಯ ಕಾಫಾದುವ ನಿಟ್ತಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.