ನವದೆಹಲಿ, ಮಾ 25 (DaijiworldNews/SM): ದೇಶವನ್ನು ವಕ್ಕರಿಸಿಕೊಂಡಿರುವ ಕೊರೊನಾವೈರಸ್ ನಿಯಂತ್ರಣಕ್ಕೆ ಎಲ್ಲರೂ ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ವೈರಸ್ ಉಲ್ಬಣ ಹಿನ್ನೆಲೆಯಲ್ಲಿ ಕ್ಯಾರಂಟೈನ್ ಸೌಲಭ್ಯಗಳಿಗೆ ಬಳಸಿಕೊಳ್ಳಲು ಈಡನ್ ಗಾರ್ಡನ್ಸ್ ಒಳಾಂಗಣ ಕ್ರೀಡಾಂಗಣವನ್ನು ನೀಡಲು ನಿರ್ಧಾರಿಸಲಾಗಿದೆ.
ಅಗತ್ಯ ಬಿದ್ದಲ್ಲಿ ಒಳಾಂಗಣ ಕ್ರೀಡಾಂಗಣ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೀಡಲು ಸಿದ್ಧ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ. ತುರ್ತು ಅಗತ್ಯ ಸಂದರ್ಭ ನಾವು ಸ್ಪಂದಿಸುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಈ ನಡುವೆ ಈಗಾಗಲೇ ಪುದುಚೇರಿಯಲ್ಲಿ ಕೊರೊನಾವೈರಸ್ ರೋಗಿಗಳಿಗೆ ಸಂಪರ್ಕತಡೆ ಸೌಲಭ್ಯಕ್ಕಾಗಿ ಪಾಂಡಿಚೆರಿ ಕ್ರಿಕೆಟ್ ಸಂಸ್ಥೆ (ಸಿಎಪಿ) ಕಟ್ಟಡವೊಂದನ್ನು ನೀಡಿದೆ. ಇದೀಗ ಬಿಸಿಸಿಐ ಅಧ್ಯಕ್ಷರೂ ಕೂಡ ಇದೇ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ. ಅಗತ್ಯಬಿದ್ದಲ್ಲಿ ಒಳಾಂಗಣ ಕ್ರೀಡಾಂಗಣವನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.