ನವದೆಹಲಿ, ಮಾ.28 (DaijiworldNews/PY) : ಇಡೀ ಪ್ರಪಂಚವೇ ಕೊರೊನಾ ವೈರಸ್ ವಿರುದ್ದ ಹೋರಾಟ ನಡೆಸುತ್ತಿದೆ. ಈ ನಡುವೆ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ ಡಿಜೆ ಬ್ರಾವೋ ಕೊರೊನಾ ವಿರುದ್ದ ರ್ಯಾಪ್ ಸಾಂಗ್ವೊಂದನ್ನು ರಚಿಸಿದ್ದು, ನಾವು ಸೋಲಲ್ಲ ಎಂದು ಹಾಡಿದ್ದಾರೆ.
ಬ್ರಾವೋ ಕ್ರಿಕೆಟ್ ಮೈದಾನದಲ್ಲಿ ಮಿಂಚಿನಂತಹ ಕ್ಯಾಚ್ಗಳನ್ನು ಹಿಡಿದು, ಸೂಪರ್ ಬ್ಯಾಟಿಂಗ್, ಬೌಲಿಂಗ್ ಮೂಲಕ ಜನರನ್ನು ಆಕರ್ಷಿಸಿದ್ದಾರೆ. ಇದೀಗ ಕೊರೊನಾ ವೈರಸ್ನಿಂದಾಗಿ ಆತಂಕಗೊಂಡ ಜನರಿಗೆ ಧೈರ್ಯ ಹೆಚ್ಚಿಸಲು ಬ್ರಾವೋ ಹಾಡು ರಚಿಸಿದ್ದು, ಜನರಿಗೆ ಧೈರ್ಯವನ್ನು ಹೆಚ್ಚಿಸಲು ಈ ಹಾಡನ್ನು ರಚಿಸಿದ್ದಾರೆ. ಜನರಿಗೆ ಈ ಮುಖಾಂತರ ಜನರಿಗೆ ಎಚ್ಚರಿಕೆಯಿಂದ ಇರೋಣ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ನಾವು ಎಲ್ಲರೂ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಆದರೆ, ಇದಕ್ಕೆ ನಾವು ಹೆದರಬಾರದು. ಮನೆಯಲ್ಲೇ ಇದ್ದು ಕೊರೊನಾ ವೈರಸ್ ವಿರುದ್ದ ಹೋರಾಡೋಣ. ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳೋಣ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ ಎನ್ನುವ ರ್ಯಾಪ್ ಸಾಂಗ್ ಹಾಡಿರುವ ಬ್ರಾವೋ, ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನಾವು ಸೋಲಲ್ಲ ಕೊರೊನಾ ವಿರುದ್ಧ ಹೋರಾಡೋಣ. ಚಾಂಪಿಯನ್ ಬ್ರಾಂಡ್ ಎಂದು ಬರೆದುಕೊಂಡಿದ್ದಾರೆ.
ಮನೆಯಲ್ಲೇ ಕೊರೊನಾ ವೈರಸ್ ಸೋಂಕಿನಿಂದ ಬಂಧಿಯಾಗಿರುವ ಕ್ರಿಕೆಟಿಗರು ಹಾಗೂ ಸೆಲೆಬ್ರಿಟಿಗಳು ಕೊರೊನಾ ವಿರುದ್ದ ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಕೂಡಾ ಇತ್ತೀಚೆಗಷ್ಟೆ ಮನೆಯಲ್ಲೇ ಇರಿ, ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ, ನಮ್ಮಸುರಕ್ಷತೆಗಾಗಿ ನಾವು ಮನೆಯಲ್ಲೇ ಇರುವುದು ಒಳ್ಳೆಯದು ಎಂದು ವಿಡಿಯೋವೊಂದನ್ನು ಮಾಡಿದ್ದರು.
ಇದರೊಂದಿಗೆ, ನ್ಯೂಜಿಲೆಂಡ್ ಆಟಗಾರ ಹಾಗೂ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಇಶ್ ಸೋಧಿ ಕೂಡಾ ಕೊರೊನಾ ವೈರಸ್ ವಿರುದ್ದ ರ್ಯಾಪ್ ಸಾಂಗ್ವೊಂದನ್ನು ಹಾಡಿದ್ದರು. ಇದನ್ನು ರಾಜಸ್ಥಾನ್ ರಾಯಲ್ಸ್ ತಂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋದಲ್ಲಿ ಸೋಧಿ ಹಲವಾರು ರ್ಯಾಪ್ ಸಾಂಗ್ಗಳನ್ನು ಜೋಡಿಸಿ ಹಾಡಿ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಮನೆಯಲ್ಲೇ ಇರಿ ಎಂದು ಜನರನ್ನು ಕೇಳಿಕೊಂಡಿದ್ದರು.