ಮುಂಬೈ, ಮಾ 31 (DaijiworldNews/SM): ಮಹಾರಾಷ್ಟ್ರ ಸೇರಿದಂತೆ ದೇಶದೆಲ್ಲೆಡೆ ಕೊರೊನಾ ತೀವ್ರ ಗತಿಯಿಯಲ್ಲಿ ವ್ಯಾಪಿಸುತ್ತಿದೆ. ಕೊರೊನಾ ವಿರುದ್ಧದ ಹೋರಾಟವನ್ನು ಟೀಂ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಬೆಂಬಲಿಸಿದ್ದಾರೆ. ಹಾಗೂ ಕೊರೊನಾ ಚಿಕಿತ್ಸೆಗೆಂದು ಸುಮಾರು 80 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಬಳಿಕ ಟ್ವೀಟ್ ಮಾಡಿರುವ ಅವರು, ದೇಶವನ್ನು ಮೊದಲಿನ ಸಹಜ ಸ್ಥಿತಿಗೆ ತರಬೇಕಾಗಿದೆ. ಇದರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೇಶದಲ್ಲಿರುವ ನಮ್ಮ ನಾಯಕರ ಬೆಂಬಲಕ್ಕೆ ನಾವು ನಿಲ್ಲಬೇಕಾಗಿದೆ. ದೇಶದ ನಾಯಕರು ನೀಡಿರುವ ನಿದರ್ಶನಗಳನ್ನು ನಾವು ಚಾಚು ತಪ್ಪದೆ ಪಾಲಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ದೇಶದೆಲ್ಲೆಡೆ ಕೊರೊನಾ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ದೇಶದ ಪರವಾಗಿ ನಿಂತು ಕೊರೊನಾ ನಿಯಂತ್ರಣಕ್ಕಾಗಿ ಹೋರಾಡುವವರ ಬಗ್ಗೆ ಪ್ರಾರ್ಥಿಸಬೇಕಾದ ಅಗತ್ಯತೆ ಇದೆ. ಹಾಗೂ ಮಾನವೀಯ ನೆಲೆಯಲ್ಲಿ ಕೆಲಸ ಕಾರ್ಯಗಳನ್ನು ನಡೆಸಬೇಕಾಗಿದೆ.