ರಾಂಚಿ, ಎ.04 (DaijiworldNews/PY) : ಮಹೇಂದ್ರ ಸಿಂಗ್ ಧೋನಿ ಶಾಂತ ನಾಯಕ ಎಂದೇ ಪ್ರಸಿದ್ದರಾಗಿದ್ದಾರೆ. ಆದರೆ, ಆಗಾಗ್ಗೆ ಧೋನಿಗೂ ಕೋಪ ಬರುತ್ತದೆ ಎನ್ನುವುದು ಅವರ ಸ್ನೇಹಿತರೊಬ್ಬರು ತಿಳಿಸಿದ್ದಾರೆ.
ಧೋನಿ ಆಪ್ತ ಗೆಳೆಯರೊಬ್ಬರು ಸುಮ್ಮನೆ ಪ್ರಶ್ನೆ ಕೇಳಿದ್ದು, ಅಷ್ಟಕ್ಕೆ ಧೋನಿ ಕೋಪಗೊಂಡಿದ್ದಾರೆ.
ನಾವು ಕೆಲವು ದಿನಗಳ ಹಿಂದೆ ಧೋನಿ ನಿವೃತ್ತಿ ವಿಚಾರವಾಗಿ ಅವರೆದುರು ಮಾತನಾಡಿದ್ದೆವು. ಅದಕ್ಕೆ ನಮ್ಮ ಮೇಲೆ ಧೋನಿ ಸಿಟ್ಟು ಆಡಿಕೊಂಡಿದ್ದರು. ಧೋನಿಗೆ ಈಗಲೂ ತಾನು ಎಲ್ಲರಂತೆ ಫಿಟ್ ಆಗಿದ್ದೇನೆ. ವಿಕೆಟ್ ಕೀಪರ್ಗಳ ಪೈಕಿ ಅತ್ಯುತ್ತಮ ಎನ್ನುವ ಬಗ್ಗೆ ನಂಬಿಕೆ ಇದೆ. ಧೋನಿ ಐಪಿಎಲ್ ಪ್ರಾರಂಭವಾಗುವ ವಿಶ್ವಾಸದಿಂದ ಸಿಕ್ಕಾಪಟ್ಟೆ ಅಭ್ಯಾಸ ನಡೆಸಿದ್ದರು. ಅಷ್ಟೊಂದು ತಯಾರಿ ನಡೆಸಿದ್ದನ್ನು ನಾನು ನೋಡಿರಲಿಲ್ಲ.
ಅವರಿಗೆ ತಾನು ಯುವಕನಲ್ಲ ಎನ್ನುವುದು ತಿಳಿದಿದೆ. ಹಾಗಿದ್ದರೂ ತರಬೇತಿಯಿಂದ ಫಿಟ್ ಆಗಿರಬಹುದು ಎಂಬುದು ಧೋನಿ ದೃಢವಾದ ವಿಶ್ವಾಸವಾಗಿದೆ. ಯಾರ ಬೆಂಬಲವಿಲ್ಲದ ಹೊರತಾಗಿಯೂ ತಾನು ಏನೆಂಬುದನ್ನು ಧೋನಿ ತೋರಿಸಿದ್ದಾರೆ. ಅಭಿಮಾನಿಗಳು ಈಗ ಧೋನಿಯ ಬೆಂಬಲಕ್ಕೆ ಇದ್ದಾರೆ ಎಂದು ತಿಳಿಸಿದರು.
ಸದ್ಯ ಧೋನಿಯ ನಿವೃತ್ತಿ ವಿಚಾರವಾಗಿ ವ್ಯಾಪಕ ಚರ್ಚೆಯಾಗುತ್ತಿದೆ. ಧೋನಿ ಭವಿಷ್ಯ ಐಪಿಎಲ್ ನಂತರ ತೀರ್ಮಾನ ಎಂದು ಹೇಳಲಾಗಿತ್ತು. ಚೆನ್ನೈ ಪರ ಐಪಿಎಲ್ನಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡಿದರೆ ಧೋನಿ ಮುಂದಿನ ಟಿ20 ವಿಶ್ವಕಪ್ಗೆ ಆಯ್ಕೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕೊರೊನಾ ವೈರಸ್ ಕಾರಣದಿಂದ ಈ ವರ್ಷ ಐಪಿಎಲ್ ನಡೆಯುವ ಸಾಧ್ಯತೆ ತೀರಾ ಕಡಿಮೆ.