ಲಂಡನ್, ಏ 16 (DaijiworldNews/SM): ಕೊರೊನಾ ವೈರಸ್ ಕ್ರೀಡಾ ಜಗತ್ತಿನ ಮೇಲೆ ತೀವ್ರವಾದ ಪರಿಣಾಮ ಬೀರಿದೆ. ಆದರೆ, ಈ ಬಗ್ಗೆ ಪ್ರಮುಖ ನಾಯಕರು ಜಾಗೃತಿ ಮೂಡಿಸುತ್ತಿದ್ದಾರೆ. ವಿಶ್ವದ ಪ್ರಮುಖ ನಾಯಕರು ಸಾಮಾಜಿಕ ಅಂತರ ಹಾಗೂ ಮನೆಯಲ್ಲೇ ಇರುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಇದೀಗ ಖ್ಯಾತ ಸ್ಪ್ರಿಂಟರ್ ಜಮೈಕಾದ ಉಸೇನ್ ಬೋಲ್ಟ್ ಕೂಡ ಸಾಮಾಜಿಕ ಅಂತರದ ಜಾಗೃತಿ ಮೂಡಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ತಮ್ಮದೇ ವಿಶಿಷ್ಠ ರೀತಿಯಲ್ಲಿ ಒತ್ತಿ ಹೇಳಿದ್ದಾರೆ. ಒಲಿಂಪಿಕ್ಸ್ ನಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಂದ ಅಂತರ ಕಾಯ್ದುಕೊಂಡು ಪದಕ ಗೆದ್ದ ಚಿತ್ರವನ್ನು ಪ್ರಕಟಿಸಿದ್ದಾರೆ. ಆ ಮೂಲಕ ಸಾಮಾಜಿಕ ಅಂತರದ ಹೊಸ ಆಯಾಮವನ್ನು ಪ್ರತಿಪಾದಿಸಿದ್ದಾರೆ.
ಸ್ಪರ್ಧೆಯ ಅಂತಿಮ ರೇಖೆ ಮುಟ್ಟುವ ಚಿತ್ರವನ್ನು ಪ್ರಕಟಿಸಿರುವ ಅವರು, ಸಾಮಾಜಿಕ ಅಂತರ ಎಂದರೇ ಇದು ಎಂದಿದ್ದಾರೆ. ಆ ಮೂಲಕ ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಿದ್ದು, ಜಾಗತಿಕವಾಗಿ ಕೊರೊನಾ ಹೊಡೆದೋಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.