ನವದೆಹಲಿ, ಎ.26 (DaijiworldNews/PY) : ಟೀ ಇಂಡಿಯಾ ಬ್ಯಾಟ್ಸ್ಮನ್, ಕನ್ನಡಿಗ ಕೆ.ಎಲ್ ರಾಹುಲ್ ತಮ್ಮ ಕ್ರಿಕೆಟ್ ಕಿಟ್ಗಳನ್ನು ಹರಾಜು ಮಾಡಿ ಸುಮಾರು 8 ಲಕ್ಷ ರೂ.ವನ್ನು ಬಡ ಮಕ್ಕಳ ಕಲ್ಯಾಣಕ್ಕಾಗಿ ನೀಡಿದ್ದಾರೆ.
ಕೆ. ಎಲ್.ರಾಹುಲ್ ಏಪ್ರಿಲ್ 18ರ ತಮ್ಮ 28ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಮ್ಮ ಹುಟ್ಟುಹಬ್ಬದ ದಿನದಂದು ಬಡ ಮಕ್ಕಳಿಗೆ ನೆರವಾಗುತ್ತಿರುವ ಸಂಸ್ಥೆಗೆ ನೆರವಾಗುತ್ತಿರುವುದಾಗಿ ತಿಳಿಸಿದ್ದರು. ನಮ್ಮ ಸಹಯೋಗ ಪಾಲುದಾರ ಭಾರತ್ ಆರ್ಮಿಗೆ ನನ್ನ ಕ್ರಿಕೆಟ್ ಪ್ಯಾಡ್ಗಳು, ಗ್ಲೌಸ್ಗಳು, ಹೆಲ್ಮೆಟ್ಗಳು ಮತ್ತು ಕೆಲವು ಜೆರ್ಸಿಗಳನ್ನು ಕೊಡುಗೆಯಾಗಿ ನೀಡಲು ಬಯಸಿದ್ದು, ಇವೆಲ್ಲವನ್ನೂ ಅವರು ಹರಾಜಿಗಿಟ್ಟು, ಅವೇರ್ ಫೌಂಡೇಶನ್ಗೆ ದೇಣಿಗೆ ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದ್ದರು.
ವರದಿಯ ಪ್ರಕಾರ, ರಾಹುಲ್ ಅವರ ಬ್ಯಾಟ್ ಸುಮಾರು 2,64,228 ರೂ.ಗಳಿಗೆ ಹರಾಜಾದರೆ, ಅವರ ಟೆಸ್ಟ್ ಜರ್ಸಿ 1,32,774 ರೂ.ಗಳಿಗೆ ಮಾರಾಟ ಮಾಡಲಾಗಿದೆ. ಏಕದಿನ ಪಂದ್ಯದ ಜರ್ಸಿ 1,13,240 ರೂ., ಹೆಲ್ಮೆಟ್ 1,22,677 ರೂ., ಪ್ಯಾಡ್ಗಳು 33,028 ರೂ. ಮತ್ತು ಟಿ20 ಜರ್ಸಿ 1,04,824 ರೂ.ಗೆ ಹರಾಜು ಮಾಡಿ, ಬಡ ಮಕ್ಕಳ ನೆರವಿಗಾಗಿ ಹಣ ಸಂಗ್ರಹಿಸಲಾಗಿದೆ. ಹರಾಜಿನ ಮೂಲ ರಾಹುಲ್ ಅವರ ಕಿಟ್ಗಳಿಂದ ಒಟ್ಟು ಸುಮಾರು 7,99,553 ರೂ. ದೊರೆತಿದೆ.
ಬಡ ಮಕ್ಕಳಿಗೆ ಅವೇರ್ ಫೌಂಡೇಶನ್ ಬಡ ಮಕ್ಕಳಿಗೆ ಸಹಾಯ ಮಾಡುತ್ತಿದೆ. ಹಾಗಾಗಿ ಇವರಿಗೆ ನೆರವಾಗುವ ಈ ನಿರ್ಧಾರ ನನ್ನ ಪಾಲಿಗೆ ವಿಶೇಷವೆಂದೆನಿಸಿತು. ಮಕ್ಕಳಿಗೆ ನೆರವಾಗುದಕ್ಕಾಗಿ ಇದಕ್ಕಿಂತ ಉತ್ತಮವಾದುದು ನನಗೆ ತೋಚಲಿಲ್ಲ ಎಂದು ರಾಹುಲ್ ತಿಳಿಸಿದ್ದಾರೆ.