ಕೋಲ್ಕತಾ, ಏ 30 (DaijiworldNews/SM): ಭಾರತ ಫುಟ್ಬಾಲ್ ತಂಡ ಕಂಡ ಅತ್ಯಂತ ಶ್ರೇಷ್ಟ ಆಟಗಾರ ಹಾಗೂ ಫುಟ್ಬಾಲ್ ದಿಗ್ಗಜ ಚುನಿ ಗೋಸ್ವಾಮಿ(82) ಗುರುವಾರದಂದು ವಿಧಿವಶರಾಗಿದ್ದಾರೆ. ಮೃತರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
1957 ರಲ್ಲಿ ಚುನಿ ತಮ್ಮ ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿ ಮೈದಾನಕ್ಕಿಳಿದರು. ಬಳಿಕ ಅದ್ಭುತ ಪ್ರದರ್ಶನ ಹಾಗೂ ಪಾರದರ್ಶಕ ನಡೆಯಿಂದಾಗಿ ರಾಷ್ಟ್ರ ತಂಡದ ನಾಯಕರಾದರು. 1964 ರಲ್ಲಿ ತಮ್ಮ 27 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿ ತಮ್ಮ ರಾಜ್ಯದಲ್ಲಿ ಕ್ರಿಕೆಟ್ ಪ್ರತಿನಿಧಿಸಿದರು.
1962ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದ ಭಾರತದ ತಂಡದ ಕ್ಯಾಪ್ಟನ್ ಎನ್ನುವ ಹಿರಿಮೆಯೂ ಕೂಡ ಇವರಿಗೆ ಸಲ್ಲುತ್ತದೆ. ಇವರು ಪಶ್ಚಿಮ ಬಂಗಾಳದ ಸ್ಥಳೀಯ ಕ್ರಿಕೆಟ್ ಪಂದ್ಯದಲ್ಲೂ ತಮ್ಮ ರಾಜ್ಯವನ್ನು ಪ್ರತಿನಿಧಿಸಿರುವುದು ಗಮನಾರ್ಹವಾಗಿದೆ.
ಅವರು ಕಳೆದ ಕೆಲವು ದಿನಗಳಿಂದ ಸಕ್ಕರೆ ಕಾಯಿಲೆ, ನರದೌರ್ಬಲ್ಯ ಸೇರಿದಂತೆ ಕೆಲವು ರೋಗಗಳಿಂದ ಬಳಲುತ್ತಿದ್ದರು.