ನವದೆಹಲಿ, ಮೇ 04 (DaijiworldNews/SM): ಸಚಿನ್ ತೆಂಡುಲ್ಕರ್ ಕ್ರಿಕೆಟ್ ನ ಲೆಜೆಂಡ್ ಎಂಬ ಒಂದು ಕಾಲವಿತ್ತು. ಅವರು ಬರೆದ ದಾಖಲೆಗಳನ್ನು ಯಾರಿದಲೂ ಮುರಿಯಲಾಸಾಧ್ಯ ಎನ್ನಲಾಗುತ್ತಿತ್ತು. ಆದರೆ, ಇದಕ್ಕೆ ಯುವ ನಾಯಕ ವಿರಾಟ್ ಉತ್ತರವನ್ನು ನೀಡುತ್ತಲೇ ಬಂದಿದ್ದಾರೆ. ಬಹುತೇಕ ಸಚಿನ್ ಬರೆದ ದಾಖಲೆಗಳನ್ನು ಮುರಿದಿದ್ದಾರೆ. ಹೀಗಿರುವಾಗಲೇ ಸಚಿನ್ ಹಾಗೂ ಕೊಹ್ಲಿ ನಡುವಿನ ಕೆಲವೊಂದು ಸಾಮ್ಯತೆಗಳನ್ನು ಎಡಗೈ ಬ್ಯಾಟ್ಸ್ ಮನ್ ರೈನ ಹೇಳಿಕೊಂಡಿದ್ದಾರೆ.
ಅಂದಹಾಗೆ 2011ರಲ್ಲಿ ಭಾರತ ತಂಡ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದ ಪರ ಸಚಿನ್ ಮತ್ತು ಕೊಹ್ಲಿ ಜೊತೆಯಾಗಿ ಆಡಿದ್ದರು. ಅದೇ ತಂಡದಲ್ಲಿ ಸುರೇಶ್ ರೈನಾ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರು. ಅದೇ ಕಾರಣದಿಂದಾಗಿ ಇವರಿಬ್ಬರನ್ನು ಸುಲಭವಾಗಿ ತುಲನೆ ಮಾಡಲು ರೈನಾ ಕೈಯಿಂದ ಸಾಧ್ಯವಾಗಿದೆ.
ಸಂದರ್ಶನದಲ್ಲಿ ಮಾತನಾಡಿರುವ ರೈನಾ, ಇಬ್ಬರು ದಿಗ್ಗಜ ಆಟಗಾರರ ಜೊತೆಗೆ ಏಕಕಾಲದಲ್ಲಿ ಆಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. "ಸಚಿನ್ ಮತ್ತು ವಿರಾಟ್ ಇಬ್ಬರೂ ಹಲವು ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ. ವಿರಾಟ್ ಆಡುವ ಪ್ರತಿ ಪಂದ್ಯವನ್ನು ಗೆಲ್ಲಲು ನೋಡುತ್ತಾರೆ. ಆದರೆ, ಸಚಿನ್ ಅವರ ಆಲೋಚನೆಯೇ ಬೇರೆಯಾಗಿದೆ. ಪ್ರತಿ ಪಂದ್ಯದಲ್ಲೂ ತಾಳ್ಮೆಯಿಂದ ಇರಲು ಅವರು ಪ್ರಯತ್ನ ಮಾಡುತ್ತಾರೆ.
ಸಚಿನ್ ಬಳಿ ಸದಾ ತಾಳ್ಮೆ ಇರುತ್ತದೆ. ಅವರ ತಾಳ್ಮೆಯಿಂದಲೇ ನಾವು 2011ರ ವಿಶ್ವಕಪ್ನಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿದೆ ಎಂದಿದ್ದಾರೆ. ತಂಡದ ಪ್ರತಿಯೊಬ್ಬ ಆಟಗಾರನ ಮನದಲ್ಲೂ ನಾವು ಈ ವಿಶ್ವಕಪ್ ಗೆಲ್ಲಬಹುದು ಎಂಬ ಆತ್ಮವಿಶ್ವಾಸ ಮೂಡಿಸಿದ್ದು ಸಚಿನ್ ತೆಂಡುಲ್ಕರ್ ಎಂಬುವುದಾಗಿ ಅವರು ತಿಳಿಸಿದ್ದಾರೆ.