ಮುಂಬೈ, ಮೇ 05 (DaijiworldNews/PY) : ಟೀ ಇಂಡಿಯಾ ಆಟಗಾರ ಆಶಿಶ್ ನೆಹ್ರಾ ಅವರು ತಮ್ಮ ಪಾದಾರ್ಪಣೆ ಪಂದ್ಯದ ಸಂದರ್ಭ ನಡೆದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಕಿಕ್ರೆಟ್ಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದ ಸಂದರ್ಭ ಕಿತ್ತು ಹೋದ ಶೂ ಧರಿಸಿ ಆಡಿದ್ದೆ ಎಂದು ಹೇಳಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಲು ನನ್ನೊಂದಿಗೆ ಇದ್ದ ಒಂದು ಜೋಡಿ ಶೂಗಳನ್ನು ಉಪಯೋಗಿಸಿದ್ದೆ. ನಾನು ಅವುಗಳನ್ನು ರಣಜಿ ಪಂದ್ಯವನ್ನಾಡಲು ಹೆಚ್ಚಾಗಿ ಬಳಸಿದ್ದರಿಂದ ಅದು ಆಟದ ನಡುವೆ ಕಿತ್ತು ಬಂದಿತ್ತು. ನನ್ನೊಂದಿಗೆ ಬೇರೆ ಯಾವುದೇ ಶೂ ಇಲ್ಲದ ಕಾರಣ ಇನ್ನಿಂಗ್ಸ್ ವಿರಾಮದ ಸಂದರ್ಭ ಕಿತ್ತು ಬಂದ ಶೂ ಅನ್ನು ಹೊಲಿದುಕೊಂಡು ಪಂದ್ಯದಲ್ಲಿ ಆಡಿದ್ದೆ. ಆ ಘಟನೆ ನನಗೆ ಇಂದಿಗೂ
1999ರಲ್ಲಿ ಕೊಲಂಬೋದಲ್ಲಿ ಶ್ರೀಲಂಕಾ ವಿರುದ್ದ ನಡೆದಿದ್ದ ಪಂದ್ಯಾಟದಲ್ಲಿ ನೆಹ್ರಾ ಅವರು ಟೀಂ ಇಂಡಿಯಾದ ಪರ ಪಾದಾರ್ಪಣೆ ಮಾಡಿದ್ದರು. ದೆಹಲಿಯ ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್ ಸಮೀಪದಲ್ಲಿರುವ ಮೈದಾನದಲ್ಲಿ ನೆಹ್ರಾ ಅವರು ಬೌಲಿಂಗ್ ಅಭ್ಯಾಸ ಮಾಡಿರುವುದಾಗಿ ಹೇಳಿದ್ದಾರೆ. ಹಲವಾರು ಜನ ಸ್ಟೆಷನ್ ಬಳಿಯ ಮೈದಾನಕ್ಕೆ ಬರುತ್ತಿದ್ದ ಕಾರಣ ಎಂದು ಒಬ್ಬನೇ ಇರುತ್ತಿರಲಿಲ್ಲ. ಕಲ್ಲುಗಳನ್ನು ಎಸೆಯುತ್ತಾ ಬೌಲಿಂಗ್ ಅಭ್ಯಾಸ ಮಾಡಿದ್ದೆವು. ಕೋಚ್ ನನ್ನ ಬೌಲಿಂಗ್ನಲ್ಲಿ ಹೊಸ ವೈವಿಧ್ಯವನ್ನು ತೋರಿಸುವಂತೆ ಹೇಳುತ್ತಿದ್ದರು ಎಂದು ತಮ್ಮ ಆರಂಭಿಕ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ.
ನೆಹ್ರಾ ಅವರು ಟೀಂ ಇಂಡಿಯಾ ಪರ 17 ಟೆಸ್ಟ್, 120 ಏಕದಿನ, 27 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಸಂದರ್ಭ ಧೋನಿ ಅವರ ಕುರುತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಧೋನಿ ಅವರಿಗೆ ಫಿಟ್ನೆಸ್ ಕಾಯ್ದುಕೊಂಡು ಆಡುವ ಅವಕಾಶವಿದ್ದರೆ, ಈಗಲೂ ಅವರೇ ನನ್ನ ಮೊದಲ ಆಯ್ಕೆಯಾಗಿರುತ್ತಾರೆ. ಆದರೆ, ಅವರು ಯಾವಾಗ, ಯಾವ ಶಾಕ್ ನೀಡುತ್ತಾರೆ ಎಂದುಕೊಳ್ಳಲು ಆಗುವುದಿಲ್ಲ. ಸದ್ಯ ಅವರು ನಿವೃತ್ತಿ ಘೋಷಣೆ ಮಾಡದಿದ್ದರೂ ಸಹ ನನಗೆ ಅವರ ನಿವೃತ್ತಿ ನೋವನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.