ನವದೆಹಲಿ, ಮೇ 13 (DaijiworldNews/SM): ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಎಂಬ ಹೆಗ್ಗಳಿಕೆ ಗಳಿಸಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಾಳ್ಮೆ ಕಳೆದುಕೊಂಡಿರುವುದನ್ನು ನಾನು ಕಂಡಿದ್ದೇನೆ ಎಂದು ಮಾಜಿ ಆಟಗಾರ ಗೌತಮ ಗಂಭೀರ್ ಗಂಭೀರ ಹೇಳಿಕೆ ನೀಡಿದ್ದಾರೆ.
ಧೋನಿಯವರು ತಮ್ಮ ಒಂದೂವರೆ ದಶಕದ ಕ್ರಿಕೆಟ್ ಬದುಕಿನಲ್ಲಿ ತಾಳ್ಮೆ ಕಳೆದುಕೊಂಡಿರುವುದು ಅತ್ಯಂತ ಕಡಿಮೆ ಸಂದರ್ಭ. ಹೀಗಾಗಿ ಕ್ಯಾಪ್ಟನ್ ಕೂಲ್ ಎಂದೇ ಎಲ್ಲರಿಂದ ಅವರು ಕರೆಸಿಕೊಂಡಿದ್ದಾರೆ. ಆದರೆ, ಭಾರತಧೋನಿಯವರು ಆನ್ ಫಿಲ್ಡ್ ನಲ್ಲಿ ಕೂಲಾಗಿದ್ದರೂ ಕೂಡ, ಆಫ್ ಫೀಲ್ಡ್ ನಲ್ಲಿ ಹಲವು ಬಾರಿ ತಾಳ್ಮೆ ಕಳೆದುಕೊಂಡಿದ್ದಾರೆ ಎಂದು ಅವರೊಂದಿಗೆ ಆಟವಾಡಿದ್ದ ಗಂಭೀರ್ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಭಾರತ ತಂಡದ ಯುವ ಸ್ಪಿನ್ನರ್ ಕುಲ್ದೀಪ್ ಯಾದವ್ ಸಹ, ಕಳೆದ 20 ವರ್ಷಗಳಲ್ಲಿ ಮೊದಲ ಬಾರಿ ಧೋನಿ ಕೋಪಗೊಂಡದ್ದನ್ನು ಕಂಡು ತಮಗೆ ಭಯವಾಗಿತ್ತು ಎಂದಿದ್ದರು.