ನವದೆಹಲಿ ಮೇ 16 (DaijiworldNews/SM): ಕೊರೊನಾ ಕಾರಣದಿಂದಾಗಿ ದೇಶದಲ್ಲಿ ಎಲ್ಲಾ ಕಾರ್ಯಗಳಿಗೆ ತೊಡಕುಂತಾಗಿದೆ. ಈ ನಡುವೆ ಅಭಿಮಾನಿಗಳಿಗೆ ರಸದೌತನ ನೀಡುತ್ತಿದ್ದ ಐಪಿಎಲ್ ಸರಣಿ ಮುಂದೂಡಲ್ಪಟ್ಟಿದೆ. ಒಂದೊಮ್ಮೆ ಮುಂದೂಡಲ್ಪಟ್ಟಿರುವ ಸರಣಿ ರದ್ದುಗೊಂಡಲ್ಲಿ ಬಿಸಿಸಿಐಗೆ ಭಾರೀ ನಷ್ಟವಾಗುವ ಸಾಧ್ಯತೆ ಇದೆ.
ಇನ್ನು ಸದ್ಯದ ವಾತಾವರಣ ಗಮನಿಸಿದ ಸಂದರ್ಭದಲ್ಲಿ ಸರಣಿ ನಡೆಸುವುದು ಕಷ್ಟ ಸಾಧ್ಯ. ಮುಂದೂಡಲಾಗಿರುವ ಸರಣಿ ಮತ್ತೆ ನಡೆಸಲು ಅವಕಾಶಗಳು ಸಿಗುವುದು ಕಡಿಮೆ ಎನ್ನಲಾಗುತ್ತಿದೆ. ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಾರ್ಚ್ 29ಕ್ಕೆ ಶುರುವಾಗಬೇಕಿದ್ದ ಐಪಿಎಲ್ 2020 ಟೂರ್ನಿಯನ್ನು ಈಗಾಗಲೇ ಮುಂದೂಡಲಾಗಿದೆ. ಮುಂದಿನ ಆದೇಶದವರೆಗೆ ಸರಣು ರದ್ದು ಪಡಿಸಲಾಗಿದೆ.
ಇನ್ನು ಮುಂದಿನ ದಿನಗಳಲ್ಲಿ ಸುರಕ್ಷಿತ ವಾತಾವರಣ ಇದ್ದರೆ ಮಾತ್ರ ಟೂರ್ನಿ ಆಯೋಜನೆಗೆ ಮುಂದಾಗುವುದಾಗಿ ಬಿಸಿಸಿಐ ಈಗಾಗಲೇ ಹೇಳಿಕೊಂಡಿದೆ. ಇದು ಸ್ವಲ್ಪ ಅನುಮಾನಕ್ಕೆ ಕಾರಣವಾಗಿದೆ. ಇದೀಗ ಐಪಿಎಲ್ ನಡೆಯದೇ ಇದ್ದರೆ ಆಗುವ ನಷ್ಟದ ಬಗ್ಗೆ ಬೆಳಕು ಚೆಲ್ಲಿರುವ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ13ನೇ ಆವೃತ್ತಿಯ ಟೂರ್ನಿ ಈ ವರ್ಷ ರದ್ದಾದರೆ ಬರೋಬ್ಬರಿ 4 ಸಾವಿರ ಕೋಟಿ ರೂ. ನಷ್ಟ ಸಂಭವಿಸಲಿದೆ ಎಂದಿದ್ದಾರೆ.