ದುಬೈ, ಮೇ 20 (DaijiworldNews/SM): ಕ್ರಿಕೆಟ್ ಮೈದಾನದಲ್ಲಿ ಬೌಲರ್ ಗಳು ನಾನಾ ರೀಯ ಚಮತ್ಕಾರಗಳನ್ನು ಮೆರೆಯುತ್ತಾರೆ. ಕೆಲವರು ಚೆಂಡಿಗೆ ಎಂಜಲನ್ನು ಬಳಸುತ್ತಾರೆ. ಆದರೆ, ಇದನ್ನು ನಿಷೇಧಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.
ಬೌಲರ್ ಗಳು ಚೆಂಡಿನ ಮೇಲೆ ಲಾಲಾರಸವನ್ನು ಬಳಸುವುದನ್ನು ನಿಷೇಧಿಸುವಂತೆ ಐಸಿಸಿ ತಾಂತ್ರಿಕ ಸಮಿತಿ ಶಿಫಾರಸು ಮಾಡಿದೆ. ಭಾರತದ ಮಾಜಿ ನಾಯಕ ಹಾಗೂ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ ಸೋಮವಾರ ಎಂಜಲು ಬಳಕೆಯನ್ನು ನಿಷೇಧಿಸುವಂತೆ ಶಿಫಾರಸು ಮಾಡಿದೆ.
ಈಗಾಗಲೇ ವಿಶ್ವದೆಲ್ಲೆಡೆ ಕೊರೊನಾ ವೈರಸ್ ನಿಂದಾಗಿ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೊರೊನಾ ನಿಯಂತ್ರಿಸಲು ಹಾಗೂ ಜಾಗೃತಿ ಮೂಡಿಸಲು ಬಾಲ್ ಗೆ ಎಂಜಲು ಬಳಸುವುದನ್ನು ನಿಷೇಧಿಸುವುದು ಅಗತ್ಯ ಎಂದು ಅವರು ಶಿಫಾರಸು ಮಾಡಿದ್ದಾರೆ.