ಬೆಂಗಳೂರು, ಮೇ 30 (DaijiworldNews/SM): ದೇಶದೆಲ್ಲೆಡೆ ಕೊರೊನಾ ಮಹಾಮಾರಿ ಅಟ್ಟಹಾಸ ಮುಂದುವರೆಸಿರುವ ಸಂದರ್ಭದಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಹೋರಾಟ ಮುಂದುವರೆದಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ವಾರಿಯರ್ಸ್ ಗೆ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ, ಕನ್ನಡಿಗ ಕೆ.ಎಲ್. ರಾಹುಲ್ ದುಬಾರಿ ಗಿಫ್ಟ್ ನೀಡಿದ್ದಾರೆ.
ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಹಗಲಿರುಲು ದುಡಿಯುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಬೆಂಗಳೂರಿನಲ್ಲಿ ಕೆ.ಎಲ್. ರಾಹುಲ್ ದುಬಾರಿ ಎನಿಸಿರುವ ಪೂಮಾ ಶೂಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಮೂಲಕ ಕೋವಿಡ್ ಸಂದರ್ಭದಲ್ಲಿ ಪರಸ್ಪರ ರಾಜಕೀಯ ಕೆಸರೆರಚಾಟ ನಡೆಸುತ್ತಿರುವವರಿಗೆ ಮಾರ್ಗದರ್ಶಿಯಾಗಿದ್ದಾರೆ. ಈ ಕ್ಲಿಸ್ಟ್ ಸಂದರ್ಭವನ್ನು ನಿವಾರಿಸುವವರನ್ನು ನಿಟ್ಟಿನಲ್ಲಿ ಹೋರಾಡುವವರಿಗೆ ಅವಮಾನ ಮಾಡುವವರು ಒಂದೆಡೆ ಇದ್ದರೆ, ಬಲು ಅಪರೂಪ ಎಂಬಂತೆ ಇಂತಹ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಕೆ.ಎಲ್ ರಾಹುಲ್ ಅವರು ಈ ಮಾನವೀಯ ಕಾರ್ಯವನ್ನು ಮಾಡಿದ್ದು, ಕೊರೊನಾ ವಾರಿಯರ್ಸ್ ಗಳ ಮನಗೆದ್ದಿದ್ದಾರೆ. ತಮಗೆ ಸಾಧ್ಯವಾದಷ್ಟು ವಾರಿಯರ್ಸ್ ಗಳಿಗೆ ಪೂಮಾ ಶೂ ಉಡುಗೊರೆ ನೀಡಿದ್ದಾರೆ. ತಮಗೆ ಅಪಾಯವಿದೆ ಎಂದು ತಿಳಿದಿದ್ದರೂ ಅದನ್ನು ಮೆಟ್ಟಿನಿಂತು ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರ ಕಾರ್ಯಕ್ಕೆ ಕೆ.ಎಲ್. ರಾಹುಲ್ ಗೌರವ ನೀಡಿದ್ದು ಅಭಿನಂದನೆ ಸಲ್ಲಿಸಿದ್ದಾರೆ.
ರಾಜಕೀಯ ಬೇಳೆ ಬೆಯಿಸಿಕೊಂಡ ಅಧಿಕಾರದ ದಾಹಕ್ಕಾಗಿ ಅಲೆದಾಡುವವರು ಕೊರೊನಾ ವಿರುದ್ಧ ಯುದ್ದಕ್ಕಾಗಿ ರಣರಂಗಕ್ಕಿಳಿದಿರುವ ವಾರಿಯರ್ಸ್ ಗಳಿಗೆ ಗೌರವ, ಗೌರವ ಧನ ನೀಡುವುದು, ಅವರ ಕಾರ್ಯಗಳನ್ನು ಮೆಚ್ಚಿ ಉಡುಗೊರೆ ನೀಡುವ ಕಾರ್ಯ ಮಾಡಬೇಕಾಗಿದೆ.