ನವದೆಹಲಿ, ಜೂ 04 (DaijiworldNews/SM): ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಜಾತಿ ನಿಂದನೆ ಆರೋಪ ಎದುರಿಸುತ್ತಿದ್ದು, ಅವರ ವಿರುದ್ಧ ಕೇಸು ದಾಖಲಾಗಿದೆ. ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್ ವಿರುದ್ಧ ಬಳಸಿರುವ ಪದಗಳೇ ಇದೀಗ ಅವರನ್ನು ಸಂಕಷ್ಟಕ್ಕೀಡು ಮಾಡಿವೆ.
ಭಾರತ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರಿಂದಿಗೆ ಲೈವ್ ಚಾಟ್ ನಡೆಸುತ್ತಿದ್ದ ಸಂದರ್ಭದಲ್ಲಿ ಆನ್ಲೈನ್ ಇದ್ದಂತದ ಚಹಲ್ ಮತ್ತು ಕುಲ್ದೀಪ್ ಅವರನ್ನು 'ಭಂಗಿ' ಎಂದು ಕರೆದಿದ್ದರು. ಅದುವೇ ಅವರಿಗೆ ಇದೀಗ ಸಂಕಷ್ಟವನ್ನು ತಂದೊಡ್ಡಿದೆ. ಈ ಪದ ಬಳಕೆಯಿಂದ ಯುವಿ ವಿವಾದದ ಸುಳಿಗೆ ಸಿಲುಕಿದ್ದಾರೆ.
ಉತ್ತರ ಭಾರದಲ್ಲಿ ದಲಿತ ವರ್ರ್ಗದ ಜನರನ್ನು ಕರೆಯಲು ಮೇಲ್ವರ್ಗದವರು 'ಭಂಗಿ' ಎಂಬ ಪದ ಬಳಕೆ ಮಾಡುತ್ತಾರೆ. ಅಂದಹಾಗೆ ಜಾತಿ ನಿಂದನೆ ನಿರ್ಮೂಲನೆ ಸಲುವಾಗಿ ಈ ಪದ ಬಳಕೆಗೆ ನಿಷೇಧವಿದೆ. ಇದರ ವಿರುದ್ಧ ಹರಿಯಾಣದಲ್ಲಿ ದಲಿತ ಪರ ಹೋರಾಟಗಾರ ಒಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆ ಯುವಿಗೆ ಸಂಕಷ್ಟ ಎದುರಾಗಿದೆ.