ಮುಂಬೈ, ಜೂ 06 (DaijiworldNews/PY) : ಆರಂಭಿಕ ದಿನಗಳಲ್ಲಿ ಇರ್ಫಾನ್ ಪಠಾಣ್ ಅವರನ್ನು ಪಾಕಿಸ್ತಾನದ ವಾಸಿಂ ಅಕ್ರಮ್ಗೆ ಹೋಲಿಕೆ ಮಾಡಲಾಗುತ್ತಿತ್ತು ಎಂದು ಸುರೇಶ್ ರೈನಾ ಎಂದಿದ್ದಾರೆ.
ತನ್ನ 19 ನೇ ಪ್ರಾಯದಲ್ಲೇ ಇರ್ಫಾನ್ ಪಠಾಣ್ ಅವರು ಟೀಂ ಇಂಡಿಯಾಕ್ಕೆ ಎಂಟ್ರಿ ನೀಡಿದರು. 2002 ರಲ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾಗೆ ಬಂದ ಇರ್ಫಾನ್ ಪಠಾಣ್ ಅವರು, ತನ್ನ ಸ್ಬಿಂಗ್ ಬೌಲಿಂಗ್ನಿಂ ಪ್ರಸಿದ್ದಿ ಪಡೆದಿದ್ದರು. 2004ರಲ್ಲಿ ಇರ್ಫಾನ್ ಪಠಾಣ್ ಅವರು ಪಾಕಿಸ್ತಾನ ಸರಣಿಗೆ ಆಯ್ಕೆಯಾಗಿ ಮುದಲ ಮುಲ್ತಾನ್ ಟೆಸ್ಟ್ನಲ್ಲಿ ಆರು ವಿಕೆಟ್ ಪಡೆದು ಮಿಂಚಿದ್ದರು.
ಇವರ ಈ ಪ್ರದರ್ಶನಗಳೇ ಇವರನ್ನು ಮುಂದೆ ಟೀಂ ಇಂಡಿಯಾ ಪೋಸ್ಟರದದದದ ಬಾಯ್ ಇಮೇಜ್ ತಂದಿಟ್ಟಿತ್ತು. ಈ ಸಂದರ್ಭ ಪಾಕಿಸ್ತಾನದ ಸ್ವಿಂಗ್ ಸ್ಪೆಷಲಿಸ್ಟ್ ವಾಸೀಂ ಅಕ್ರಮ್ ಜೊತೆ ಇರ್ಫಾನ್ ಪಠಾಣ್ ಅವರನ್ನು ಹೋಲಿಕೆ ಮಾಡಲಾಗುತ್ತಿತ್ತು.
ಈ ವಿಚಾರವನ್ನು ನೆನಪಿಸಿಕೊಂಡ ಸುರೇಶ್ ರೈನಾ, 2005ರಲ್ಲಿ ನಾನು ಟೀಂ ಇಂಡಿಯಾಗೆ ಬಂದಿದ್ದು. ಆ ಸಮಯದಲ್ಲಿ ನೀವು ಪ್ರಸಿದ್ದಿಯಾಗಿದ್ದಿರಿ. ಉದ್ದವಾದ ಹಾಗೂ ಗುಂಗುರು ಕೂದಲಿನಿಂದ ನೀವು ಹೆಡ್ ಆಂಡ್ ಶೋಲ್ಡರ್ನ ರಾಯಭಾರಿಯ ರೀತಿಯಲ್ಲಿ ಕಾಣುತ್ತಿದ್ದಿರಿ ಎಂದು ಹೇಳಿದರು.