ನವದೆಹಲಿ, ಜೂ 19 (DaijiworldNews/SM): ವಿರಾಟ ಕೊಹ್ಲಿ ಅಂದಾಕ್ಷಣ ನೆನಪಾಗುವುದು ದಾಖಲೆಗಳು. ಕೊಹ್ಲಿಯನ್ನು ದಾಖಲೆಗಳ ಸರದಾರ ಎಂದರೂ ತಪ್ಪಾಗಲ್ಲ. ಇವರಿಗೆ ಪೈಪೋಟಿಯಾಗಿ ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್ ಲೈನಲ್ಲಿದ್ದಾರೆ.
ಹೀಗಿರುವಾಗಲೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೇ ಸರ್ವಶ್ರೇಷ್ಠ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸರ್ಫರಾಜ್ ಆಯ್ಕೆ ಮಾಡಿದ್ದಾರೆ. ವಿರಾಟ್ ಗೆ ಸರಿಸಾಟಿ ಹಾಗೂ ಅಂತಹ ಅದ್ಭುತ ಪ್ರದರ್ಶನ ನೀಡಬಲ್ಲ ಆಟಗಾರ ತ್ತೊಬ್ಬರಿಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ನಡುವೆಯೇ ರೋಹಿತ್ ಅವರು ಕೊಹ್ಲಿಗೆ ಸಮನಾಗಿ ನಿಲ್ಲಬಲ್ಲ ಆಟಗಾರ ಎಂಬುವುದಾಗಿಯೂ ಹೇಳಿದ್ದಾರೆ.
ಕ್ರಿಕ್ಟ್ರ್ಯಾಕರ್ ವೆಬ್ಸೈಟ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ತಮ್ಮ ನಾಯಕತ್ವದ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪ್ರಬಲ ಹಿಡಿತವನ್ನು ಹೊಂಡಿದ್ದಾರೆ. ಎಷ್ಟೇ ಬಲಿಷ್ಠ ಬೌಲಿಂಗ್ ಇದ್ದರೂ ಅದನ್ನು ಸಮಸ್ಥವಾಗಿ ಎದುರಿಸಿ ನಿಭಾಯಿಸುವ ಸಾಮಾರ್ಥ್ಯ ಇವರಲ್ಲಿದೆ. ಈ ಇಬ್ಬರಲ್ಲಿ ಒಬ್ಬರು ಅಬ್ಬರಿಸಿದರೂ ಅಂದು ಭಾರತಕ್ಕೆ ಗೆಲುವು ನಿಶ್ಚಿತ ಎಂದಿದ್ದಾರೆ.