ನವದೆಹಲಿ, ಜು 10 (DaijiworldNews/SM): ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಪ್ಟೆಂಬರ್ ತಿಂಗಳಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಟೂರ್ನಿ ಮುಂದೂಡಲಾಗಿದೆ. ಬಹುತೇಕ ಮುಂದಿನ ವರ್ಷದ ಜೂನ್ ತಿಂಗಳಲ್ಲಿ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಇದರಿಂದಾಗಿ ಆತುರದಿಂದ ಸರಣಿ ನಡೆಸಬೇಕಾದ ಅನಿವಾರ್ಯತೆ ಸಂಘಟಕಾರಿಗಿಲ್ಲ. ಆ ಮೂಲಕ ಸಂಘಟಕರು ಒಂದಿಷ್ಟು ನಿರಾಳರಾಗಿದ್ದಾರೆ. ಆ ಮೂಲಕ ಸೆಪ್ಟೆಂಬರ್ ನಲ್ಲಿ ನಡೆಯಬೇಕಾಗಿದ್ದ ಏಷ್ಯಾ ಕಪ್ ಪಂದ್ಯಾವಳಿಯವನ್ನು ಮುಂದೂಡಲು ನಿರ್ಧರಿಸಿದೆ ಎಂದು ಏಷ್ಯನ್ ಕ್ರಿಕೆಟ್ ಸಮಿತಿ ಟ್ವೀಟ್ ಮಾಡಿದೆ ಎನ್ನುವ ಮಾಹಿತಿ ಇದೀಗ ಲಭ್ಯವಾಗಿದೆ.