ನವದೆಹಲಿ, ಜು 25 (DaijiworldNews/PY): ಎಂಎಸ್ ಧೋನಿ ಅವರು ಇನ್ನೂ ಒಳ್ಳೆಯ ಲಯದಲ್ಲಿ ಇದ್ದಾರೆ. ಅವರಿಗೆ ಆರು ಅಥವಾ ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ದೇಶಕ್ಕಾಗಿ ಪಂದ್ಯಗನ್ನು ಗೆಲ್ಲಿಸಿಕೊಡುವ ಶಕ್ತಿ ಇದ್ದರೆ ಅವರು ಇನ್ನೂ ಕ್ರಿಕೆಟ್ ಆಡಬಹುದು ಎಂದು ಭಾರತದ ಮಾಜಿ ಕ್ರಿಕೆಟ್ ಆಟಗಾರ ಮತ್ತು ಸಂಸದ ಗೌತಮ್ ಗಂಭೀರ್ ಅವರು ಹೇಳಿದ್ದಾರೆ.
ಈ ಬಗ್ಗೆ ಖಾಸಗಿ ಕ್ರೀಡಾ ಮಾಧ್ಯಮದಲ್ಲಿ ಮಾತನಾಡಿದ ಅವರು, ನಿವೃತ್ತಿ ಎನ್ನುವುದು ಆಟಗಾರರ ವೈಯುಕ್ತಿಕ ವಿಚಾರವಾಗಿದೆ. ಈ ಬಗ್ಗೆ ಯಾರೂ ಪ್ರಶ್ನೆ ಮಾಡಬಾರದು ಎಂದಿದ್ದಾರೆ.
ಎಂಎಸ್ ಧೋನಿ ಅವರು ಫಿಟ್ ಆಗಿದ್ದಾರೆ. ಅವರು ಭಾರತಕ್ಕಾಗಿ ಆಡಿ ಪಂದ್ಯವನ್ನು ಗೆಲ್ಲಿಸಿಕೊಡಲಿ. ಧೋನಿಯವರು ಇನ್ನೂ ಕೂಡಾ ಉತ್ತಮ ಲಯದಲ್ಲಿದ್ದಾರೆ. ಆರು ಅಥವಾ ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಭಾರತಕ್ಕಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಶಕ್ತಿ ಇದ್ದಲ್ಲಿ, ಅವರೂ ಇನ್ನೂ ಆಡಬಹುದಾಗಿದೆ ಎಂದಿದ್ದಾರೆ.
ಈಗಲೂ ಕೂಡಾ ಧೋನಿ ಅವರು ಫಿಟ್ ಆಗಿದ್ದಾರೆ. ಅಲ್ಲದೇ, ಉತ್ತಮ ಫಾರ್ಮ್ನಲ್ಲಿದ್ದು ಕ್ರಿಕೆಟ್ ಆಡಬಹುದಾಗಿದೆ. ಆಟಗಾರರನನ್ನು ನಿವೃತ್ತಿ ಪಡೆದುಕೊಳ್ಳಿ ಎಂದು ಯಾರಿಗೂ ಕೂಡಾ ಒತ್ತಾಯ ಮಾಡುವ ಅಧಿಕಾರವಿಲ್ಲ. ನಾವು ಕ್ರಿಕೆಟ್ ಆಡಬೇಕು ಎಂದು ವೈಯುಕ್ತಿಕವಾಗಿ ತೀರ್ಮಾನ ಮಾಡಿರುತ್ತೇವೆ. ಹಾಗಾಗಿ ನಾವು ವೈಯುಕ್ತಿಕವಾಗಿ ನಿವೃತ್ತಿಯನ್ನೂ ಕೂಡಾ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
2019ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಧೋನಿ ಅವರು ಕೊನೆಯದಾಗಿ ಬ್ಯಾಟಿಂಗ್ ಮಾಡಿದ್ದರು. ಇದಾದ ಬಳಿಕ ಅವರು ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಈ ನಡುವೆ ಧೋನಿ ಅವರು ಭಾರತೀಯ ಸೇನೆಯಲ್ಲಿಯೂ ಕೂಡಾ ಸೇವೆ ಸಲ್ಲಿಸಿದ್ದರು. ಬಳಿಕ ಚೆನ್ನೈಗೆ ಬಂದು ಐಪಿಎಲ್-2020ರಲ್ಲಿ ಆಡಲು ತಯಾರಿ ನಡೆಸಿದ್ದರು. ಕೊರೊನಾ ಹಿನ್ನೆಲೆ ಟೂರ್ನಿಯೂ ಕೂಡಾ ಮುಂದೂಡಿದ್ದು, ಸೆಪ್ಟೆಂಬರ್ 19ರಿಂದ ಐಪಿಎಲ್ ಆರಂಭವಾಗಲಿದೆ. ಧೋನಿ ಅವರ ಅಭಿಮಾನಿಗಳು ಅವರಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಎಂಎಸ್ಡಿ ಅವರ ನಿವೃತ್ತಿಯ ವಿಚಾರವಾಗಿಯೂ ಕೂಡಾ ಚರ್ಚೆ ನಡೆಯುತ್ತಿದೆ. ಎಂಎಸ್ಡಿ ಅವರು ರಾಷ್ಟ್ರೀಯ ತಂಡಕ್ಕೆ ಮರಳಲು ಸಾಧ್ಯವಿಲ್ಲ. ಸದ್ಯ ಕೆ.ಎಲ್ ರಾಹುಲ್ ಅವರು ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಉತ್ತಮವಾದ ಲಯದಲ್ಲಿದ್ದಾರೆ ಎಂದು ಕೆಲ ಮಾಜಿ ಆಟಗಾರರು ಹೇಳಿದ್ದಾರೆ.