ಮುಂಬೈ, ಆ 01 (DaijiworldNews/PY): ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಮಗುವಿನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ದೇವರ ಆಶೀರ್ವಾದ ಎಂದು ಬರೆದುಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು ಕೈಯಲ್ಲಿ ಮಗುವನ್ನು ಹಿಡಿದುಕೊಂಡಿದ್ದು, ನಗುಮೊಗದಿಂದ ಮಗುವನ್ನು ನೋಡುತ್ತಿರುವ ಫೋಟೋವೊಂದನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ದೇವರ ಆಶೀರ್ವಾದ ಎಂದು ಬರೆದುಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯಾ ಪತ್ನಿ ನತಾಶಾ ಸ್ಟಾಂಕೋವಿಕ್ ಗುರುವಾರ ವಡೋದರದಲ್ಲಿ ಗಂಡು ಮಗುವಿಗೆ ಜನ್ಮನೀಡಿದ್ದರು. ಪಾಂಡ್ಯಾ ಅವರು ಮಗುವಿನ ಕೈಹಿಡಿದುಕೊಂಡಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಹಾರ್ದಿಕ್ ಪಾಂಡ್ಯಾ ಹಾಗೂ ನತಾಶಾ ಅವರಿಗೆ ಶುಭಾಶಯ ತಿಳಿಸಿದ್ದಾರೆ.
ಹಾರ್ದಿಕ್ ಪಾಂಡ್ಯಾ ಅವರು ಈ ವರ್ಷದ ಆರಂಭದಲ್ಲಿ ನತಾಶಾ ಅವರೊಂದಿಗೆ ನಿಶ್ಚಿತಾರ್ಥವಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಅಲ್ಲದೇ, ಜನವರಿ 1ರಂದು ನತಾಶಾ ಅವರನ್ನು ವಿವಾಹವಾಗುವ ಪ್ರಸ್ತಾಪವನ್ನು ಮುಂದಿಟ್ಟ ಹಾರ್ದಿಕ್ ಪಾಂಡ್ಯಾ ಅವರು ಮೇ ತೇರಾ, ತೂ ಮೇರಿ
ಜಾನ್, ಸಾರಾ ಹಿಂದೂಸ್ತಾನ್ ಎಂದು ಬರೆದುಕೊಂಡಿದ್ದರು.
ಹಾರ್ದಿಕ್ ಪಾಂಡ್ಯಾ ಹಾಗೂ ನತಾಶಾ ಅವರು ನಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಲಿದೆ ಎಂದು ಮೇ ತಿಂಗಳಿನಲ್ಲಿ ಬಹಿರಂಗಪಡಿಸಿದ್ದರು.