ನವದೆಹಲಿ, ಆ. 15 (DaijiworldNews/MB) : ''ಪ್ರಸ್ತುತ ಇಂಗ್ಲೆಂಡ್ ವಿರುದ್ಧವಾಗಿ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟ್ಸ್ಮನ್ಗಳು ಬ್ಯಾಟಿಂಗ್ ಮಾಡಲು ಹೆದರುತ್ತಿದ್ದಾರೆ'' ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಾಮಾಮ್ ಉಲ್-ಹಕ್ ಟೀಕಿಸಿದ್ದಾರೆ.
ತಮ್ಮದೇ ಆದ ಯೂಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ''ಪಾಕ್ನ ಬ್ಯಾಟ್ಸ್ಮ್ಯಾನ್ಗಳು ಇಂಗ್ಲೆಂಡ್ ತಂಡದ ದಾಳಿಯನ್ನು ಎದುರಿಸಿ ಶಾಟ್ ಬಾರಿಸಲು ಭಯ ಪಡುತ್ತಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುವುದು ಈ ಸಂದರ್ಭದಲ್ಲಿ ಅತೀ ಮುಖ್ಯ'' ಎಂದು ಹೇಳಿದ್ದಾರೆ.
''ಪಾಕ್ ಆಟಗಾರರು ಆಕ್ರಮಣಕಾರಿಯಾಗಿ ಆಡಿ ಇಂಗ್ಲೆಂಡ್ ತಂಡವನ್ನು ಮಣಿಸಬೇಕೆಂದು ನನ್ನ ಮನವಿ. ಇಲ್ಲವಾದರೆ ಮಳೆಯೇ ನಮ್ಮನ್ನು ಕಾಪಾಡಬೇಕಾಗುತ್ತದೆ ಎಂದು ಹೇಳಿರುವ ಅವರು, ಸೋತಿರುವ ಪಾಕ್ನ ಹೆಚ್ಚಿನ ಬ್ಯಾಟ್ಸ್ಮ್ಯಾನ್ಗಳ ಬ್ಯಾಟ್ಗಳು ಕಾಲಿನ ಹಿಂಬದಿಯಲ್ಲಿಯೇ ಇರುವುದನ್ನು ನಾವು ಗಮನಿಸಬಹುದಾಗಿದೆ. ನೀವು ಯಾವಾಗ ಬ್ಯಾಟಿಂಗ್ ಮಾಡುತ್ತೀರಿ. ಆಗ ಬ್ಯಾಟ್ ಕಾಲಿನ ಮುಂಭಾಗದಲ್ಲಿ ಇರಬೇಕು. ನೀವು ಸರಿಯಾದ ಬಾಲ್ನ್ನು ಎದುರಿಸಲಾಗದೆ, ಸ್ಲಿಪ್ನಲ್ಲಿ ಕ್ಯಾಚ್ ನೀಡಿದರೆ ಅದು ಆಟದಲ್ಲಿನ ವೈಫಲ್ಯ'' ಎಂದು ಅಭಿಪ್ರಾಯಪಟ್ಟಿದ್ದಾರೆ.
ಎರಡನೇ ಪಂದ್ಯ ಮೊದಲನೇ ದಿನದ ಅಂತ್ಯಕ್ಕೆ ಪಾಕಿಸ್ತಾನ 5 ವಿಕೆಟ್ಗಳನ್ನು ಕಳೆದುಕೊಂಡು 126 ರನ್ ಗಳಿಸಿತ್ತು. ಎರಡನೇ ದಿನ ಮಂದಬೆಳಕಿನ ಕಾರಣ ಬೇಗ ಎರಡನೇ ದಿನವನ್ನು ಅಂತ್ಯಗೊಳಿಸಲಾಗಿದ್ದು 40.2 ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡಿರುವ ಪಾಕಿಸ್ತಾನ 229 ರನ್ ಗಳಿಸಿದೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ 60 ರನ್ ಗಳಿಸಿದ್ದು, ಬ್ಯಾಟಿಂಗ್ ಮುಂದುವರಿಸಲಿದ್ದಾರೆ.