ನವದೆಹಲಿ, ಆ 29 (DaijiworldNews/PY): ಖೇಲ್ ರತ್ನ ಪ್ರಶಸ್ತಿ-2020ರ ವಿಜೇತೆ ವಿನೇಶ್ ಫೋಗಟ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಈಗ ನನಗೆ ಯಾವುದೇ ಕೊರೊನಾದ ಲಕ್ಷಣಗಳಿಲ್ಲ. ಆದರೆ, ಕೊರೊನಾ ಪರೀಕ್ಷೆ ಮಾಡಿಸಿದ ವೇಳೆ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
ವಿನೇಶ್ ಅವರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ, ಇಂದು ನಡೆಯಲಿರುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ನನಗೆ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
ವಿನೇಶ್ ಅವರಿಗೆ, ಶನಿವಾರ ನಡೆಯಲಿರುವ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಖೇಲ್ ರತ್ನವನ್ನು ಸ್ವೀಕರಿಸಲು ಕೇಂದ್ರಕ್ಕೆ ಹಾಜರಾಗುವಂತೆ ಸೋನೆಪಥ್ನ ಎಸ್ಎಐ ತಿಳಿಸಿತ್ತು.
ಈ ಬಗ್ಗೆ ಪ್ರತಿಕ್ರಿಸಿದ ಅವರು, ಕೊರೊನಾ ದೃಢಪಟ್ಟ ಕಾರಣ ನನಗೆ ಏನೂ ಮಾಡಲೂ ಆಗುತ್ತಿಲ್ಲ. ಈ ಬಗ್ಗೆ ನನಗೆ ಬೇಸರವಾಗಿದೆ. ಎಲ್ಲಾ ದೇವರ ಇಚ್ಛೆ. ಸ್ವಲ್ಪ ಸಮಯದ ಕಳೆದ ಬಳಿಕ ನಾನು ಇನ್ನೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವೆ ಎಂದು ವಿನೇಶ್ ಹೇಳಿದ್ದಾರೆ.
ವಿನೇಶ್ ಅವರು, ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳುವ ಸಲುವಾಗಿ ಲಕ್ನೋಗೆ ಪ್ರಯಾಣಿಸಬೇಕಿತ್ತು. ಆದರೆ, ಕೊರೊನಾ ದೃಢಪಟ್ಟ ಕಾರಣ ತಮ್ಮ ಪ್ರಯಾಣವನ್ನು ಮುಂದೂಡಿದ್ದಾರೆ.