ದುಬೈ, ಸೆ. 02 (DaijiworldNews/SM): ಕೊರೋನಾ ಲಾಕ್ ಡೌನ್ ನಿಂದ ಹಲವಾರು ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದು, ಕ್ರಿಕೆಟ್ ಟೂರ್ನಿಗಂತೂ ದೊಡ್ಡ ಹೊಡೆತವೇ ಬಿದ್ದಿದೆ. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಈ ಅವಧಿಯಲ್ಲಿ ವಿರಾಮ ಸಿಕ್ಕಿದೆ. ಆದರೂ ಕ್ರಿಕೆಟ್ ಅನ್ನು ತಪ್ಪಿಸಿಕೊಂಡಿಲ್ಲವಂತೆ.
ಈ ಬಗ್ಗೆ ಸ್ವತಃ ಕೊಹ್ಲಿ ಅವರೇ ಬಹಿರಂಗ ಪಡಿಸಿದ್ದಾರೆ. ಇದೀಗ ಐಪಿಎಲ್ ಹಿನ್ನೆಲೆ ಅಭ್ಯಾಸ ಪಂದ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೊದಲು 6 ತಿಂಗಳ ಕಾಲ ಯಾವುದೇ ಸರಣಿಗಳು ಇರಲಿಲ್ಲ. ಆದರೂ ವಿರಾಟ್ ತಮ್ಮ ನೆಚ್ಚಿನ ಕ್ರಿಕೆಟ್ ಗೆ ವಿರಾಮ ಹೇಳಿರಲಿಲ್ಲ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದೇನೆ. ಎಲ್ಲೂ ಕೂಡ ದೀರ್ಘ ವಿರಾಮ ಪಡೆದುಕೊಂಡಿಲ್ಲ. ಆದರೆ, ಕೊರೋನಾ ಲಾಕ್ ಡೌನ್ ಸಂದರ್ಭದ ವಿರಾಮ ವಿಭಿನ್ನವಾಗಿತ್ತು. ಹತ್ತು ವರ್ಷದಲ್ಲಿ ಮೊದಲ ಬಾರಿಗೆ ದೀರ್ಘ ವಿರಾಮ ಪಡೆದುಕೊಂಡಿದ್ದೆ ಎಂದು ಅವರು ತಿಳಿಸಿದ್ದಾರೆ.