ದುಬೈ, ಸೆ 08 (DaijiworldNews/PY): ಹಿಂದಿನ ಪಂದ್ಯದಲ್ಲಿ ಅನುಭವಿಸಿದ ಸೋಲು ಹಾಗೂ ನಿರಾಸೆಯನ್ನು ಮರೆತು ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಶಾಂತ ರೀತಿಯಲ್ಲಿ ಮುನ್ನೆಡೆಸುತ್ತೇನೆ ಎಂದು ಆರ್ಸಿಬಿ ತಂಡ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಆರ್ಸಿಬಿ ತಂಡದಲ್ಲಿ ಉತ್ತಮ ಬ್ಯಾಟ್ಸ್ಮನ್ಗಳಿದ್ದರೂ ಕೂಡಾ ಕಳೆದ ಮೂರು ಐಪಿಎಲ್ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶ ಮಾಡಲು ಸಾಧ್ಯವಾಗಿಲ್ಲ. 2016ರಲ್ಲಿ ಆರ್ಸಿಬಿ ಫೈನಲ್ ತಲುಪಿತ್ತು. 2016ರ ಆವೃತ್ತಿಯಲ್ಲಿ ಆಡಿದ್ದ ರೀತಿಯ ಬಗ್ಗೆ ನನಗೆ ನಿಜವಾಗಿಯೂ ಹೆಮ್ಮೆ ಇದೆ. ಸದ್ಯ ಇರುವ ತಂಡವು ಉತ್ತಮವಾಗಿದೆ ಎಂದಿದ್ದಾರೆ.
ಸೆಪ್ಟೆಂಬರ್ 19ರಿಂದ ಈ ವರ್ಷದ ಟೂರ್ನಿಯು ಯುನೈಟೆಡ್ ಎಮಿರೇಟ್ಸ್ನಲ್ಲಿ ನಿಗದಿಯಾಗಿದ್ದು, ಈ ಹಿಂದಿನ ಆವೃತ್ತಿಗೆ ಹೋಲಿಕೆ ಮಾಡಿದರೆ ಇಷ್ಟು ನಿರಾಳದ ಅನುಭವ ಕೊಟ್ಟಿಲ್ಲ. ಎಬಿಡಿ ವಿಲಿಯರ್ಸ್ ಈಗ ಫಿಟ್ ಆಗಿದ್ದಾರೆ ಎಂದು ಹೇಳಿದ್ದಾರೆ.