ಅಬುಧಾಬಿ, ಸೆ. 23 (DaijiworldNews/SM): ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ತಂಡ ನೈಟ್ ರೈಡರ್ಸ್ ಗೆ ಗೆಲ್ಲಲು 196 ರನ್ ಗಳ ಗುರಿ ನೀಡಿದೆ.
ಮುಂಬೈ ಪರ ಆರಂಭಿಕ ಆಟಗಾರ ಡಿ ಕಾಕ್ ಕೇವಲ ಒಂದು ರನ್ ಗಳಿಗೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ಆದರೆ, ನಾಯಕ ರೋಹಿತ್ ಶರ್ಮಾ ತಂಡಕ್ಕೆ ನೆರವಾದರು. 54 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ಸಹಿತ 80 ರನ್ ಗಳನ್ನು ಸಿಡಿಸಿದರು. ಐಪಿಎಲ್ ನಲ್ಲಿ ೨೦೦ ಸಿಕ್ಸರ್ ಸಿಡಿಸಿದ ನಾಲ್ಕನೇ ಆಟಗಾರ ಎಣಿಸಿಕೊಂಡರು. ಇನ್ನು 28 ಎಸೆತ ಎದುರಿಸಿದ ಸೂರ್ಯ ಕುಮಾರ್ ಯಾದವ್ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 47 ರನ್ ಸಿಡಿಸಿ ರನ್ ಜೌಟ್ ಆಗುವ ಮೂಲಕ ಅರ್ಧ ಶತಕದಿಂದ ವಂಚಿತರಾದರು.
ಇನ್ನುಳಿದಂತೆ ಸೌರಭ್ ತಿವಾರಿ 21 ರನ್ ಸಿಡಿಸಿ ನಿರ್ಗಮಿಸಿದರೆ, ಭರವಸೆ ಮೂಡಿಸಿದ್ದ ಆಟಗಾರ ಹಾರ್ದಿಕ್ ಪಾಂಡ್ಯ 18 ರನ್ ಗಳಿಸಿರುವ ವೇಳೆ ಅನಾವಶ್ಯಕವಾಗಿ ಹಿಟ್ ವಿಕೆಟ್ ಆಗುವ ಮೂಲಕ ಫೆವೀಲಿಯನ್ ಹಾದಿ ಹಿಡಿದರು. ಇನ್ನು ಕಿರನ್ ಪೊಲಾರ್ಡ್ 13 ರನ್ ಗಳಿಸಿದರು. ಅಂತಿಮವಾಗಿ ಮುಂಬೈ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 295 ರನ್ ಗಳಿಸಿ ಕೊಲ್ಕತ್ತಾ ತಂಡಕ್ಕೆ ಗೆಲ್ಲಲು 296 ರನ್ ಗಳ ಗುರಿ ನೀಡಿದೆ.
ಇನ್ನು ಕೊಲ್ಕತ್ತಾ ಪರ ಶಿವಂ ಮವಿ ಎರಡು ವಿಕೆಟ್ ಪಡೆದರೆ, ನರೈನ್ ಹಾಗೂ ರಸೆಲ್ ತಲಾ ಒಂದೊಂದು ವಿಕೆಟ್ ಪಡೆದರು.