ನವದೆಹಲಿ, ಸೆ 26(DaijiworldNews/PY): ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಅವರು ಪ್ರಸ್ತುತ ಐಪಿಎಲ್ ಪಂದ್ಯದ ನಂ.1 ಬ್ಯಾಟ್ಸ್ಮನ್ ಎಂದು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ಗುರುವಾರ ರಾತ್ರಿ ನಡೆದ 13ನೇ ಆವೃತ್ತಿಯ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ನ ನಾಯಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ನಡೆದ ಪಂದ್ಯಾಟದಲ್ಲಿ ಪ್ರಥಮ ಶತಕ ಸಿಡಿಸಿದ್ದು, 132 ರನ್ ಗಳಿಸಿದ್ದರು. ಅಲ್ಲದೇ ತಂಡ 206 ರನ್ ಕಲೆಹಾಕಿತ್ತು.
206 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ 109 ರನ್ಗಳಿಸಿ ರನ್ ಔಟ್ ಆಗಿತ್ತು. ಕೆ.ಎಲ್.ರಾಹುಲ್ ಕಲೆಹಾಕಿದ ವೈಯುಕ್ತಿಕ ಮೊತ್ತ ಕಿಂಗ್ಸ್ ಇಲೆವೆನ್ ಪಂಜಾಬ್ನ ಗೆಲುವಿಗೆ ಕಾರಣವಾಯಿತು. ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದ ಕೆ.ಎಲ್.ರಾಹುಲ್ ಅವರನ್ನು ವೆಸ್ಟ್ ಇಂಡೀಸ್ನ ಮಾಜಿ ಆಟಗಾರ ಇಯಾನ್ ಬಿಷಪ್ ಹಾಗೂ ಭಾರತ ತಂಡದ ಮಾಜಿ ಆರಂಭಿಕ ಗೌತಮ್ ಗಂಭೀರ್ ಶ್ಲಾಘಿಸಿದ್ದರು.
ಈ ಬಗ್ಗೆ ಮಾತನಾಡಿದ ಗೌತಮ್ ಗಂಭೀರ್, ಕೆ.ಎಲ್.ರಾಹುಲ್ ಹಾಗೂ ರೊಹಿತ್ ಶರ್ಮಾ ಎಂದರೆ ಭಯ ಎಂದಿದ್ದಾರೆ. ರೋಹಿತ್ ಶರ್ಮಾ ಹಾಗೂ ರಾಹುಲ್ ವಿರುದ್ದ ಆಡುವುದು ಭಯ ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.