ದುಬೈ, ಸೆ. 26 (DaijiworldNews/MB) : ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ಗೆ 143 ರನ್ಗಳ ಗುರಿ ನೀಡಿದ್ದು ಕನ್ನಡಿಗ ಮನೀಷ್ ಪಾಂಡೆ ಅರ್ಧಶತಕ ಬಾರಿಸಿದ್ದಾರೆ.
ಟಾಸ್ ಗೆದ್ದ ಸನ್ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆರಿಸಿಕೊಂಡಿದ್ದರು. ಈವರೆಗೆ ನಡೆದ ಈ ಬಾರಿಯ ಐಪಿಎಲ್ನ 7 ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡಗಳು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದವು.
ಬ್ಯಾಟಿಂಗ್ ನಡೆಸಿದ ಸನ್ರೈಸರ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿದೆ. ಇನ್ನಿಂಗ್ಸ್ ಪ್ರಾರಂಭದಿಂದಲೂ ರೈಡರ್ಸ್ ಪಡೆ ಶಿಸ್ತಿನ ಬಾಲಿಂಗ್ ಮಾಡಿದ್ದು ಈ ಬಾಲ್ಗಳನ್ನು ಎದುರಿಸಿ ಬ್ಯಾಟಿಂಗ್ ಮಾಡಿದ ಕನ್ನಡಿಗ ಮನೀಷ್ ಪಾಂಡೆ (31), ನಾಯಕ ಡೇವಿಡ್ ವಾರ್ನರ್ (36) ಮತ್ತು ವೃದ್ಧಿಮಾನ್ ಸಾಹ (30) ಮೊತ್ತವನ್ನು ಪಡೆದಿದ್ದಾರೆ.
ರೈಡರ್ಸ್ ಪರ ಪ್ಯಾಟ್ ಕಮಿನ್ಸ್, ವರುಣ್ ಚಕ್ರವರ್ತಿ ಮತ್ತು ಆಂಡ್ರೆ ರಸೆಲ್ ತಲಾ ಒಂದೊಂದು ವಿಕೆಟ್ ಪತನಗೊಳಿಸಿದರು.