ಶಾರ್ಜಾ, ಸೆ. 27 (DaijiworldNews/MB) : ಕನ್ನಡಿಗರಾದ ಮಯಾಂಕ್ ಅಗರವಾಲ್ ಮತ್ತು ಕೆ ಎಲ್ ರಾಹುಲ್ ರಾಜಸ್ತಾನ್ ರಾಯಲ್ಸ್ನ ಬಾಲರ್ಗಳ ಚೆಂಡಿನ ಎಸೆತವನ್ನು ಎದುರಿಸಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಇವರಿಬ್ಬರ ಬ್ಯಾಟಿಂಗ್ನಿಂದ ಪಂಜಾಬ್ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿ ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್ ಎದುರಾಳಿಗೆ ಬ್ಯಾಟಿಂಗ್ ಬಿಟ್ಟುಕೊಟ್ಟರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ಪಡೆ ರಾಯಲ್ಸ್ನ ಪಡೆಯ ಬಾಲರ್ಸ್ಗಳ ಬೆವರಿಳಿಸಿದರು.
ಮಯಾಂಕ್ 56 ಎಸೆತಗಳನ್ನು ಎದುರಿಸಿ 10 ಬೌಂಡರಿ ಮತ್ತು 7 ಸಿಕ್ಸರ್ ಸಹಿತ 106 ರನ್ ಗಳಿಸಿ ಔಟಾದರೆ, ನಾಯಕ ರಾಹುಲ್ 54 ಎಸೆತಗಳಿಂದ 7 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 69 ರನ್ ಬಾರಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 183 ರನ್ ಗಳಿಸಿತ್ತು. ಕೊನೆಯಲ್ಲಿ ಆಟವಾಡಿದ ನಿಕೋಲಸ್ ಪೂರನ್ ಕೇವಲ 8 ಎಸೆತಗಳಲ್ಲಿ 25 ರನ್ ಬಾರಿಸಿದರು. ಅವರಿಗೆ ಗ್ಲೇನ್ ಮ್ಯಾಕ್ಸ್ವೆಲ್ (13) ಉತ್ತಮ ಬೆಂಬಲ ನೀಡಿದರು. ನಿಗದಿತ 20 ಓವರ್ಗಳಲ್ಲಿ ತಂಡವು 223 ರನ್ ಗಳಿಸಿ ರಾಯುಲ್ಸ್ ಗೆ 224 ರನ್ ಗುರಿ ನೀಡಿದೆ.
ಪಂಜಾಬ್ ತಂಡದ ಪರ ಅಂಕಿತ್ ರಜಪೂತ್ (9.80) ಹೊರತುಪಡಿಸಿ ಉಳಿದೆಲ್ಲ ಬೌಲರ್ಗಳೂ 10ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಟಾಮ್ ಕರನ್ ಮತ್ತು ಅಂಕಿತ್ ರಜಪೂತ್ ತಲಾ ಒಂದೊಂದು ವಿಕೆಟ್ ಪಡೆದರು.