ಅಬುಧಾಬಿ, ಅ. 02 (DaijiworldNews/SM): ಇಲ್ಲಿನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಸನ್ ರೈಸರ್ ಹೈದ್ರಾಬಾದ್ ತಂಡ ಗೆಲ್ಲಲು 165 ರನ್ ಗಳ ಗುರಿ ನೀಡಿದ್ದು, ರನ್ ಗಳಿಸಲು ಪರದಾಡುವ ಪರಿಸ್ಥಿತಿ ಚೆನ್ನೈ ತಂಡದಲ್ಲೂ ಮುಂದುವರೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ ಹೈದ್ರಬಾದ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ನಾಯಕ ಡೇವಿಡ್ ವಾರ್ನರ್ 28, ಮನೀಶ್ ಪಾಂಡೆ 29, ಪ್ರಿಯಮ್ ಗರ್ಗ್ ಅಜೇಯ 51, ಅಭಿಷೇಕ್ ಶರ್ಮಾ 31 ರನ್ ಸಿಡಿಸಿದರು. ಅಂತಿಮವಾಗಿ ಚೆನ್ನೈ ತಂಡಕ್ಕೆ ಗೆಲ್ಲಲು 165 ರನ್ ಗಳ ಗುರಿ ನೀಡಿತು.
165 ರನ್ ಗಳ ಗುರಿ ಬೆನ್ನತ್ತಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ. ಆರಂಭಿಕ ವೇಗವಾಗಿಯೇ ವಿಕೆಟ್ ಒಪ್ಪಿಸಿ ಫೆವೀಲಿಯನ್ ಪೆರೆಡ್ ನಡೆಸಿದರು. ಫಾಫ್ ಡ್ಯುಲ್ಪೆಸಿಸ್ 22, ವಾಟ್ಸನ್ 1, ಅಂಬಾಟಿ ರಾಯುಡ್ 8, ಕೇದರ್ ಜಾದವ್ 3 ರನ್ ಗಳಿಸಿ ಔಟಾದರೆ, ರವೀಂದ್ರ ಜಡೇಜಾ(50) ಅರ್ಧ ಶತಕ ಸಿಡಿಸಿ ತಂಡಕ್ಕೆ ನೆರವಾದರು.