ಅಬುಧಾಬಿ, ಅ. 25 (DaijiworldNews/SM): ಇಲ್ಲಿನ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಬ್ಬರಿಸಿದ್ದು ರಾಜಸ್ಥಾನ ರಾಯಲ್ಸ್ ಗೆ ಗೆಲ್ಲಲು 196 ರನ್ ಗುರಿ ನೀಡಿದೆ.
ಇಲ್ಲಿನ ಶೇಖ್ ಝೈಯ್ಯದ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದ ಮುಂಬೈ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮುಂಬೈ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕ ಆಟಗಾರ ಇಶಾಂತ್ ಕಿಶಾನ್ 37 ರನ್ ಸಿಡಿಸಿದರು. ಡಿ ಕಾಕ್ 6 ರನ್ ಸಿಡಿಸಿ ನಿರ್ಗಮಿಸಿದರು. ಸೂರ್ಯ ಕುಮಾರ್ ಯಾದವ್ 40, ಸೌರಭ್ ತಿವಾರಿ 34 ರನ್ ಗಳನ್ನು ಸಿಡಿಸಿದರು. ಈ ನಡುವೆ ಪೊಲಾರ್ಡ್ ವಿಫಲಾದರೆ, ಹಾರ್ದಿಕ್ ಪಾಂಡ್ಯ ಅಬ್ಬರಿಸಿದರು.
ಪಾಂಡ್ಯ ಬ್ಯಾಟ್ ನಿಂದ ಸಿಕ್ಸರ್ ಗಳ ಸುರಿಮಳೆ:
ಇನ್ನು ಹಾರ್ದಿಕ್ ಪಾಂಡ್ಯ ಅವರು, 21 ಎಸೆತಗಳಲ್ಲಿ 2 ಬೌಂಡರಿಗಳು ಹಾಗೂ 7 ಭರ್ಜರಿ ಸಿಕ್ಸರ್ ಗಳ ನೆರವಿನಿಂದ 60 ರನ್ ಸಿಡಿಸಿದರು. ಇದರಿಂದಾಗಿ ತಂಡದ ಮೊತ್ತ ಇನ್ನೂರರ ಸನಿಹಕ್ಕೆ ತಲುಪಲು ಸಾಧ್ಯವಾಯಿತು.