ಸಿಡ್ನಿ, ಜ.04 (DaijiworldNews/PY): ಟೀಂ ಇಂಡಿಯಾದ ಆಟಗಾರರು ಸೇರಿದಂತೆ ಎಲ್ಲಾ ಸಹಾಯಕ ಸಿಬ್ಬಂದಿಗಳಿಗೆ ನಡೆಸಲಾಗಿದ್ದ ಕೊರೊನಾ ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ಎಲ್ಲರ ವರದಿಯೂ ನೆಗೆಟಿವ್ ಆಗಿದೆ ಎಂದು ಬಿಸಿಸಿಐ ಸೋಮವಾರ ಹೇಳಿದೆ.
ಮೆಲ್ಬರ್ನ್ನ ರೆಸ್ಟೋರೆಂಟ್ ಭಾರತೀಯ ಆಟಗಾರರಾದ ರೋಹಿತ್ ಶರ್ಮಾ, ರಿಷಭ್ ಪಂತ್, ಶುಭ್ಮನ್ ಗಿಲ್, ನವದೀಪ್ ಸೈನಿ ಹಾಗೂ ಪೃಥ್ವಿ ಶಾ ತೆರಳಿದ್ದರು. ಈ ಹಿನ್ನೆಲೆ ಟೀಂ ಇಂಡಿಯಾದ ಆಟಗಾರರು ಕೊರೊನಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಅಲ್ಲದೇ ಈ ಐವರು ಆಟಗಾರರನ್ನು ಪ್ರತ್ಯೇಕವಾಸ ಇರಲು ಸೂಚನೆ ನೀಡಲಾಗಿತ್ತು.
ಟೀಂ ಇಂಡಿಯಾ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳು ಜ.3ರಂದು ಕೊರೊನಾ ಆರೋಗ್ಯ ತಪಾಸಣೆಗೆ ಒಳಗಾಗಿದ್ದರು. ಇದೀಗ ಎಲ್ಲರೂ ಕೂಡಾ ಜೊತೆಯಾಗಿ ಸಿಡ್ನಿಗೆ ಪ್ರಯಾಣ ಬೆಳೆಸಲಿದ್ದಾರೆ.
ಜ.7ರಂದು ಸಿಡ್ನಿಯಲ್ಲಿ ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯವು ಪ್ರಾರಂಭವಾಗಲಿದೆ.