ನವದೆಹಲಿ, ಜ. 05 (DaijiworldNews/MB) : ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸಂಭಾವ್ಯ 11 ಆಟಗಾರರ ಬಳಗದಲ್ಲಿದ್ದ ಕೆ.ಎಲ್.ರಾಹುಲ್ ನಾಲ್ಕು ಪಂದ್ಯಗಳ ಸರಣಿಯ ಉಳಿದೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಈ ಬಗ್ಗೆ ಮಂಗಳವಾರ ಪ್ರಕಟನೆ ಹೊರಡಿಸಿರುವ ಬಿಸಿಸಿಐ, ''ಎಂಸಿಜಿಯಲ್ಲಿ ಶನಿವಾರ ನಡೆದಿದ್ದ ಭಾರತ ತಂಡದ ಅಭ್ಯಾಸದ ಸಂದರ್ಭ ಕೆ.ಎಲ್. ರಾಹುಲ್ ಅವರ ಎಡಗೈ ಮಣಿಕಟ್ಟಿಗೆ ಗಾಯವಾಗಿದ್ದು ಅವರು ಸಂಪೂರ್ಣವಾಗಿ ಚೇತರಿಕೆ ಕಾಣಲು ಮೂರು ವಾರಗಳು ಬೇಕಾಗುತ್ತದೆ. ಹಾಗಾಗಿ ಅವರು ಉಳಿದೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ'' ಎಂದು ತಿಳಿಸಿದೆ.
ತನ್ನ ವೃತ್ತಿ ಜೀವನದಲ್ಲಿ ಈವರೆಗೂ 36 ಟೆಸ್ಟ್ ಪಂದ್ಯಗಳನ್ನು ಆಡಿರುವ ರಾಹುಲ್, 5 ಶತಕ ಹಾಗೂ 11 ಅರ್ಧಶತಕಗಳನ್ನು ಗಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಟೆಸ್ಸ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಅವರು ಆಡಿಲ್ಲ. ಸದ್ಯ ತಾಯ್ನಾಡಿಗೆ ವಾಪಾಸ್ ಆಗಲಿದ್ದಾರೆ.