ಸಿಡ್ನಿ, ಜ.10 (DaijiworldNews/PY): ಭಾರತ ತಂಡದ ಆಟಗಾರರ ವಿರುದ್ದ ನಡೆದ ಜನಾಂಗೀಯ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ತಂಡಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಕ್ಷಮೆಯಾಚಿಸಿದೆ.
ಜ.9ರ ಶನಿವಾರದಂದು ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯ ವಿರುದ್ದದ ಮೂರನೇ ಟೆಸ್ಟ್ ಪಂದ್ಯಾಟದ ಸಂದರ್ಭ ಕುಡಿದ ಮತ್ತಿನಲ್ಲಿದ್ದ ಪ್ರೇಕ್ಷಕನೋರ್ವ ಭಾರತದ ತಂಡದ ಆಟಗಾರರಾದ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಅವರಿಗೆ ಜನಾಂಗೀಯ ನಿಂದನೆ ಮಾಡಿದ್ದಾನೆ.
ಈ ಸಂಬಂಧ ಬಿಸಿಸಿಐಯು ಐಸಿಸಿ ಮ್ಯಾಚ್ ರೆಫರಿ ಡೇವಿಡ್ ಬೂನ್ ಅವರಿಗೆ ದೂರು ನೀಡಿತ್ತು. ಇದೀಗ ಘಟನೆಗೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಪ್ರತಿಕ್ರಿಯೆ ನೀಡಿದೆ.
ಬಿಸಿಸಿಐ ಮೂಲಗಳ ಪ್ರಕಾರ, ಮೊಹಮ್ಮದ್ ಸಿರಾಜ್ ಅವರಿಗೆ ಸಿಡ್ನಿ ಕ್ರೀಂಡಾಗಣ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕನೋರ್ವ ಕೋತಿ ಎಂದು ನಿಂದನೆ ಮಾಡಿದ್ದ
ಈ ಬಗ್ಗೆ ದಿನದ ಆಟದ ಕೊನೆಯಲ್ಲಿ ನಾಯಕ ಅಜಿಂಕ್ಯಾ ರಹಾಎ ಸೇರಿದಂತೆ ತಂಡದ ಸದಸ್ಯರು, ಅಂಪೈರ್ಗಳು ಹಾಗೂ ಭದ್ರಾತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು.
ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ವ್ಯಕ್ತಿ ಟೀಂ ಇಂಡಿಯಾದ ಇಬ್ಬರು ಆಟಗಾರು ಫೀಲ್ಡಂಗ್ ಮಾಡುತ್ತಿದ್ದ ವೇಳೆ ನಿಂದನೆ ಮಾಡಿದ್ದಾನೆ.