ಥೈಲ್ಯಾಂಡ್, ಜ.12 (DaijiworldNews/HR): ಬ್ಯಾಡ್ಮಿಂಟನ್ ಪಂದ್ಯಾವಳಿಗಾಗಿ ಥೈಲ್ಯಾಂಡ್ ತೆರಳಿದ್ದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸದ್ಯ ಅಲ್ಲಿಯೇ ಸೈನಾ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ, ಥಾಯ್ಲೆಂಡ್ ಓಪನ್ ಬ್ಯಾಟ್ಮಿಂಟನ್ ಟೆನ್ನಿಸ್ ಟೂರ್ನಿಗೂ ಮುನ್ನಾ ಸೈನಾ ನೆಹ್ವಾಲ್ ಕೊರೊನಾ ಪರೀಕ್ಷೆಗೆ ಹಾಗೂ ಹೆಚ್ ಎಸ್ ಪ್ರಣಯ್ ಅವರು ಒಳಗಾಗಿದ್ದು, ಕೊರೊನಾ ಪಾಸಿಟಿವ್ ದೃಢಪಟ್ಟಿರುವುದಾಗಿ ತಿಳಿಸಿದ್ದಾರೆ.
ಯೋನೆಕ್ಸ್ ಥೈಲ್ಯಾಂಡ್ ಓಪನ್ ಜನವರಿ 12 ರಿಂದ 17 ರವರೆಗೆ ನಡೆಯಲಿದ್ದು, ಇದರ ನಂತರ, ಟೊಯೋಟಾ ಥೈಲ್ಯಾಂಡ್ ಓಪನ್ ಜನವರಿ 19 ರಿಂದ 24 ರವರೆಗೆ ನಡೆಯಲಿದೆ. ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ಸ್ ಜನವರಿ 27 ರಿಂದ 31 ರವರೆಗೆ ನಡೆಯಲಿದೆ. ಆದರೆ ಸೈನಾಗೆ ಕೊರೊನಾ ದೃಢಪಟ್ಟ ಹಿನ್ನಲೆ ವಿಶ್ರಾಂತಿ, ಸಾಮಾಜಿಕ ಅಂತರ ಅನಿವಾರ್ಯವಾಗಿದೆ.