ಬೆಂಗಳೂರು,ಜ.18 (DaijiworldNews/HR): ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಬಿ.ಎಸ್.ಚಂದ್ರಶೇಖರ್(75 ) ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಚಂದ್ರಶೇಖರ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಲೆಗ್ ಸ್ಪಿನ್ನರ್ ಆಗಿದ್ದ ಚಂದ್ರಶೇಖರ್ 1964ರಿಂದ 1979ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಇನ್ನು ಭಾರತದ ಪರ 58 ಟೆಸ್ಟ್ ಪಂದ್ಯವಾಡಿದ್ದ ಚಂದ್ರಶೇಖರ್ 242 ವಿಕೆಟ್ ಪಡೆದಿದ್ದರು.