ಬ್ರಿಸ್ಬೇನ್, ಜ.19 (DaijiworldNews/PY): ಇಲ್ಲಿನ ಗಾಬಾ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮೂರು ವಿಕೆಟ್ಗಳಿಂದ ಮಣಿಸಿದ ಭಾರತ 2-1 ಅಂತರದಿಂದ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಟೀಂ ಇಂಡಿಯಾ ಪರ ಶುಭ್ಮನ್ ಗಿಲ್ (91), ಚೇತೇಶ್ವರ ಪೂಜಾರ (56) ಹಾಗೂ ರಿಷಬ್ ಪಂತ್ ಅಜೇಯ 89 ರನ್ ನೆರವಿನಿಂದ ಎರಡನೇ ಇನ್ನಿಂಗ್ಸ್ನಲ್ಲಿ 96 ಓವರ್ಗೆ 7 ವಿಕೆಟ್ ನಷ್ಟಕ್ಕೆ 329 ರನ್ ಕಲೆಹಾಕುವ ಮೂಲಕ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿದೆ. ಈ ಮುಖೇನ ಟೀಂ ಇಂಡಿಯಾ ಬ್ರಿಸ್ಬೇನ್ ಟೆಸ್ಟ್ ಇತಿಹಾಸಲ್ಲೇ ಅತಿ ಹೆಚ್ಚು ರನ್ (257) ಬೆನ್ನತ್ತಿದ್ದ ಕೀರ್ತಿಗೆ ಪಾತ್ರವಾಗಿದೆ.
ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾದ ಚೇಸಿಂಗ್ಗೆ ಮಳೆ ಅಡ್ಡಿಯಾಗಿದ್ದು, ಅಂತಿಮ ದಿನವೂ ಕೂಡಾ ಮಳೆ ಕಾಡುವ ಭೀತಿ ಇತ್ತು. ಈ ಹಿನ್ನೆಲೆ ಸೋಲು-ಗೆಲುವಿಗಿಂತ ಪಂದ್ಯವು ಡ್ರಾಗೊಳ್ಳುವ ಸಾಧ್ಯತೆಯೇ ಹೆಚ್ಚಾಗಿತ್ತು. ಆದರೆ, ಟೀಂ ಇಂಡಿಯಾ ಈ ಲೆಕ್ಕಾಚಾರವನ್ನು ಬದಲಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಆಸ್ಟ್ರೇಲಿಯಾ ತಂಡ 369 ಹಾಗೂ 75.5 ಓವರ್ಗಳಲ್ಲಿ 294 (ವಾರ್ನರ್ 48, ಹ್ಯಾರಿಸ್ 38, ಲಬುಶೇನ್ 25, ಸ್ಮಿತ್ 55, ಗ್ರೀನ್ 37, ಪೇನ್ 27, ಕಮ್ಮಿನ್ಸ್ 28*, ಲ್ಯಾನ್ 13 ರನ್ ಕಲೆ ಹಾಕಿದ್ದರು.