ಟೊಕಿಯೊ, ಜ.22 (DaijiworldNews/PY): ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಥಾಮಸ್ ಬಚ್ ಹಾಗೂ ಸ್ಥಳೀಯ ಸಂಘಟಕರು ಒಲಿಂಪಿಕ್ಸ್ ಕ್ರೀಡೆಯನ್ನು ಮುಂದೂಡಲಾಗುತ್ತಿದೆ ಎನ್ನುವ ವರದಿಯನ್ನು ತಳ್ಳಿಹಾಕಿದ್ದಾರೆ.
ಸಾಂದರ್ಭಿಕ ಚಿತ್ರ
ಜುಲೈ 23ರಂದು ಒಲಿಂಪಿಕ್ ಕ್ರೀಡಾಕೂಟ ಪ್ರಾರಂಭವಾಗಲಿದೆ. ಕೊರೊನಾದ ಹಿನ್ನೆಲೆ ಈ ಹಿಂದೆ ಕ್ರೀಡಾಕೂಟವನ್ನು ಮುಂದೂಡಲಾಗಿತ್ತು. ಇದೀಗ ಕ್ರೀಡಾಕೂಟಕ್ಕೆ ಮತ್ತೆ ತೊಂದರೆಯಾಗಬಹುದೇ ಎನ್ನುವ ಭೀತಿ ಎದುರಾಗಿದೆ.
"ಕ್ರೀಡಾಕೂಟವನ್ನು ಮುಂದೂಡಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು. ಆದರೆ, ಯಾರೂ ಪಂದ್ಯ ನಡೆಯುವುದಿಲ್ಲ ಎನ್ನಲು ಮುಂದೆ ಬರಲು ತಯಾರಿಲ್ಲ. ವೈಯುಕ್ತಿಕವಾಗಿ ಕ್ರೀಡಾಕೂಟ ನಡೆಯುತ್ತದೆ ಎಂದು ನನಗೆ ಅನ್ನಿಸುತ್ತಿಲ್ಲ" ಎಂದು ಸರ್ಕಾರದ ಹಿರಿಯ ಹಿರಿಯ ಸದಸ್ಯರೋರ್ವರು ತಿಳಿಸಿದ್ದಾರೆ.
"ಇಂದು ಒಲಿಂಪಿಕ್ಸ್ನ ಸ್ಥಳೀಯ ಸಮಿತಿ ಆಯೋಜಕರು ಪತ್ರಿಕೆಯನ್ನು ಬಂದಂತಹ ವಿಚಾರವನ್ನು ನೇರವಾಗಿ ಪ್ರಸ್ತಾಪ ಮಾಡದೇ, ನಿಗದಿಯಾದ ದಿನದಂದೆ ಒಲಿಂಪಿಕ್ಸ್ ನಡೆಯಲಿದೆ. ಇದಕ್ಕೆ ಪ್ರಧಾನ ಮಂತ್ರಿ ಯೊಶಿಹಿಡೆ ಅವರ ಸಂಪೂರ್ಣ ಬೆಂಬಲವಿದೆ" ಎಂದು ತಿಳಿಸಿದ್ದಾರೆ.
"ಈ ಬೇಸಿಗೆಯಲ್ಲಿ ಟೋಕಿಯೊ 2020 ಸಂಘಟನಾ ಸಮಿತಿ ಸೇರಿದಂತೆ ನಮ್ಮ ಎಲ್ಲಾ ಪಾಲುದಾರರು ಒಲಿಂಪಿಕ್ಸ್ ಆಯೋಜಿಸುತ್ತ ಗಮನವಹಿಸಿದ್ದೇವೆ" ಎಂದಿದ್ದಾರೆ.
"ಕೊರೊನಾ ಸಾಂಕ್ರಾಮಿಕವು ಸದ್ಯದಲ್ಲಿ ನಿಯಂತ್ರಕ್ಕೆ ಬಂದು ಜನಜೀವನ ಸಹಜವಾದ ಸ್ಥಿತಿಗೆ ಮರಳಲಿದೆ ಎನ್ನುವ ಭರವಸೆ ಇದೆ. ಪಂದ್ಯಗಳನ್ನು ಸುರಕ್ಷಿತವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯವಾದ ಎಲ್ಲಾ ತಯಾರಿ ಕೈಗೊಳ್ಳಲಾಗಿದೆ. ಎಂದು ತಿಳಿಸಿದೆ.