ನವದೆಹಲಿ: ಫೆ. 02 (DaijiworldNews/SM): ಕೊರೋನಾ ಕಾರಣದಿಂದಾಗಿ ಹದಿಮೂರನೇ ಆವೃತ್ತಿಯ ಐಪಿಎಲ್ ಟೂರ್ನಿ ತಡವಾಗಿ ನಡೆದಿದೆ. ಮೊನ್ನೆ ಮೊನ್ನೆಯಷ್ಟೇ ಸರಣಿ ಮುಗಿದಿರುವ ಅನುಭವ ಜೀವಂತವಾಗಿದೆ. ಈ ನಡುವೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಿದ್ಧತೆ ನಡೆಸಲಾಗಿದ್ದು, ಏಪ್ರಿಲ್ 11ರಿಂದ ಟೂರ್ನಿ ಆರಂಭಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಹದಿನಾಲ್ಕನೇ ಆವೃತ್ತಿಯ ಟೂರ್ನಿ ಎಲ್ಲಿ ನಡೆಯಲಿದೆ ಎಂಬುವುದು ಸದ್ಯ ಕುತೂಹಲವಾಗಿದೆ. ಕಳೆದ ಟೂರ್ನಿ ದುಬೈ ಅಂಗಳದಲ್ಲಿ ನಡೆದ ಹಿನ್ನೆಲೆಯಲ್ಲಿ ಇಂತಹದೊಂದು ಸವಾಲು ಪ್ರೇಕ್ಷಕ ವರ್ಗದವರಲ್ಲಿ ಮೂಡಿದೆ. ಪ್ರೇಕ್ಷಕರಿಲ್ಲದೇ ಹದಿಮೂರನೇ ಆವೃತ್ತಿಯ ಪಂದ್ಯಗಳು ಮುಗಿದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆವೃತ್ತಿಯ ಪಂದ್ಯಗಳು ತೀವ್ರ ಕುತೂಹಲ ಮೂಡಿಸಿದೆ.
ಏಪ್ರಿಲ್ 11ರಂದು ಟೂರ್ನಿ ಆರಂಭಗೊಂಡರೆ ಬಹುಶಃ ಜೂನ್ 5 ಅಥವಾ 6ರಂದು ಮುಕ್ತಾಯಗೊಳ್ಳಲಿದೆ. ಈ ಬಾರಿ ಭಾರತದಲ್ಲೇ ಐಪಿಎಲ್ ಟೂರ್ನಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.