ವಾಷಿಂಗ್ಟನ್, ಫೆ.05 (DaijiworldNews/PY): ಅಮೇರಿಕಾದ ನ್ಯಾಷನಲ್ ಫುಟ್ಬಾಲ್ ಲೀಗ್ನ ಆಟಗಾರ ಜುಜು ಸ್ಮಿತ್-ಶುಸ್ಟರ್ ಅವರು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ದ ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವೈದ್ಯಕೀಯ ನೆರವಿಗೆ 10 ಸಾವಿರ ಡಾಲರ್ ಅನ್ನು ದೇಣಿಗೆಯಾಗಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜುಜು ಸ್ಮಿತ್ ಅವರು, "ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವೈದ್ಯಕೀಯ ನೆರವಿಗೆ ನಾನು 10 ಸಾವಿರ ಡಾಲರ್ ಅನ್ನು ದೇಣಿಗೆಯಾಗಿ ನೀಡಿದ್ದು, ಈ ವಿಚಾರವನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಈ ಸಮಯದಲ್ಲಿ ಜೀವ ಉಳಿಸಲು ಸಹಾಯ ಮಾಡಬೇಕಿದೆ. ಹೆಚ್ಚಿನ ಜೀವಗಳನ್ನು ಕಳೆದುಕೊಳ್ಳದಂತೆ ನಾವು ನಿಯಂತ್ರಿಸಬಹುದು ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
ಜುಜು ಸ್ಮಿತ್-ಶುಸ್ಟರ್ ಅವರು ಅಮೇರಿಕಾದ ನ್ಯಾಷನಲ್ ಫುಟ್ಬಾಲ್ ಲೀಗ್ನ ಆಟಗಾರರಾಗಿದ್ದು, ಇವರು ಪಿಟ್ಸ್ಬರ್ಗ್ ಸ್ಟೀಲಸ್ ತಂಡವನ್ನು ಪ್ರತಿನಿಧಿಸುತ್ತಾರೆ.
ಇನ್ನು ರೈತರ ಪ್ರತಿಭಟನೆಗೆ ಅಮೇರಿಕಾ ಬಾಸ್ಕೆಟ್ಗ್ ಆಟಗಾರ ಕೈಲ್ ಕುಜ್ಮಾ ಅವರು ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇವರು, ಅಮೇರಿಕಾದ ಬಾಸ್ಕೆಟ್ ಬಾಲ್ ಅಸೋಸಿಯೇಷನ್ನ ಆಟಗಾರರಾಗಿದ್ದು, ಲಾಸ್ ಏಂಜಲೀಸ್ ಲೇಕರ್ಸ್ ಎನ್ನುವ ತಂಡವನ್ನು ಪ್ರತಿನಿಧಿಸುತ್ತಾರೆ.