ಚೆನ್ನೈ, ಫೆ. 08 (DaijiworldNews/SM): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಟೀಂ ಇಂಡಿಯಾ ಪ್ರಯತ್ನಿಸುತ್ತಿದೆ. ಈ ಕಾರಣದಿಂದ ಇಂಗ್ಲೆಂಡ್ ತಂಡವನ್ನು 420 ರನ್ ಗಳಿಗೆ ಕಟ್ಟಿ ಹಾಕಿದೆ. ಮತ್ತೊಂದೆಡೆ ಹಿಟ್ ಮ್ಯಾನ್ ಆರಂಭಿಕ ಆಟಗಾರನನ್ನು ಬೇಗನೆ ಕಳೆದುಕೊಂಡು ಚೇಸಿಂಗ್ ಆರಂಭಿಸಿದ್ದ ಭಾರತ ಆಘಾತಕ್ಕೆ ಸಿಲುಕಿದೆ.
ನಾಲ್ಕನೇ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 39 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡಿದೆ. ಶುಭ್ನಮ್ ಗಿಲ್ ಅಜೇಯ 15 ಮತ್ತು ಚೇತೇಶ್ವರ ಪೂಜಾರ ಅಜೇಯ 12 ರನ್ ಗಳಿಸಿ ಐದನೇ ದಿನದಾಟಕ್ಕೆ ಎದುರು ನೋಡುತ್ತಿದ್ದಾರೆ. ಉತ್ತಮ ಪ್ರದರ್ಶನಕ್ಕೆ ಮುಂದಾಗಿದ್ದ ರೋಹಿತ್ ಶರ್ಮಾ 12 ರನ್ ಗಳಿಸಿ ನಿರ್ಗಮಿಸಿದರು.
ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಪಡೆಗೆ ಪ್ರವಾಸಿ ತಂಡ 420 ರನ್ ಗಳ ಗುರಿಯನ್ನು ನೀಡಿದೆ. ಸೋಮವಾರ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ಮುಂದುವರಿಸಿ, 337 ರನ್ ಗಳಿಗೆ ಆಲೌಟ್ ಆಯಿತು. ಫಾಲೋ ಆನ್ ವಿಧಿಸದೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 178 ರನ್ ಗಳಿಗೆ ಆಲೌಟ್ ಆಗಿದೆ.