ಟೋಕಿಯೊ, ಫೆ.11(DaijiworldNews/HR): ಮಹಿಳೆಯರು ಸಭೆ ಮತ್ತು ಸಮಾರಂಭಗಳಲ್ಲಿ ಹೆಚ್ಚು ಮಾತನಾಡುತ್ತಾರೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಟೋಕಿಯೊ ಒಲಿಂಪಿಕ್ಸ್ ಮುಖ್ಯಸ್ಥ ಹಾಗೂ ಜಪಾನ್ ನ ಮಾಜಿ ಪ್ರಧಾನಿ ಯೊಶಿರೊ ಮೊರಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಜಪಾನಿನಲ್ಲಿ ನಡೆದ ಒಲಿಂಪಿಕ್ಸ್ ಮಂಡಳಿಯ ಸಭೆಯಲ್ಲಿ ಯೊಶಿರೊ ಮೊರಿ ಅವರು ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು ಎನ್ನಲಾಗಿದೆ.
ಯೋಶಿರೊ ಮೊರಿ ಹೇಳಿಕೆ ಬಗ್ಗೆ ಟೆನಿಸ್ ತಾರೆ ನವೊಮಿ ಒಸಾಕ, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತಗಾರ ರೂಚಿ ಸಕಮೊಟೊ ಸೇರಿದಂತೆ ಹಲವು ಕ್ರೀಡಾಪಟುಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಇನ್ನು ತಮ್ಮ ಹೇಳಿಕೆ ವಿವಾದದ ತಿರುವು ಪಡೆಯುತ್ತಿದ್ದಂತೆ ಯೊಶಿರೊ ಅವರು ಕ್ಷಮೆ ಯಾಚಿಸಿದ್ದಾರೆ ಎನ್ನಲಾಗಿದೆ.