ಮುಂಬೈ, ಫೆ. 18 (DaijiworldNews/SM): ಹದಿನಾಲ್ಕನೇ ಆವೃತ್ತಿಯ ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆ ನಡೆದಿದ್ದು, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ 20 ಲಕ್ಷ ರೂಪಾಯಿಗಳಿಗೆ ಹರಾಜಾಗಿದ್ದಾರೆ.
ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಅರ್ಜುನ್ ತೆಂಡೂಲ್ಕರ್ ಅವರನ್ನು ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ. ಅರ್ಜುನ್ ತೆಂಡೂಲ್ಕರ್ ಅವರನ್ನು ತಂಡಕ್ಕೆ ಪಡೆಯುವುದಕ್ಕಾಗಿ ಬಿಡ್ಡಿಂಗ್ ನಲ್ಲಿ ಭಾರಿ ಪೈಪೋಟಿಯ ನಿರೀಕ್ಷೆ ಮಾಡಲಾಗಿತ್ತು.
ಎಡಗೈ ಮಧ್ಯಮ ವೇಗಿಯಾಗಿರುವ ಅರ್ಜುನ್ ತೆಂಡೂಲ್ಕರ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೂಡ ಆಗಿದ್ದಾರೆ. ಮುಂಬೈ ಪರವಾಗಿ ಮುಸ್ತಾಕ್ ಅಲಿ ಟೂರ್ನಮೆಂಟ್ ನಲ್ಲಿ ಆಡಿರುವ ಅನುಭವವನ್ನೂ ಅರ್ಜುನ್ ಹೊಂದಿದ್ದಾರೆ.
ಸಯೀದ್ ಮುಸ್ತಾಕ್ ಅಲಿ ಟೂರ್ನಮೆಂಟ್ ನಲ್ಲಿ ಅರ್ಜುನ್ ತೆಂಡೂಲ್ಕರ್ ಗಮನಾರ್ಹ ಪ್ರದರ್ಶನ ನೀಡಿಲ್ಲವಾದರೂ 73 ನೇ ಪೊಲೀಸ್ ಶೀಲ್ಡ್ ಟೂರ್ನಮೆಂಟ್ ಗಾಗಿ ಎಂಐಜಿ ಕ್ರಿಕೆಟ್ ಕ್ಲಬ್ ನಲ್ಲಿ ಉತ್ತಮ ಫಾರ್ಮ್ ನಲ್ಲಿದ್ದರು.