ನವದೆಹಲಿ, ಫೆ. 26 (DaijiworldNews/SM): ದಾವಣಗೆರೆ ಎಕ್ಸ್ ಪ್ರೆಸ್ ಎಂದೇ ಗುರುತಿಸಿಕೊಂಡಿದ್ದ ಟೀಂ ಇಂಡಿಯಾದ ವೇಗದ ಬೌಲರ್ ವಿನಯ್ ಕುಮಾರ್ ಹಾಗೂ ಟೀಂ ಇಂಡಿಯಾದ ಆಲ್ ರೌಂಡರ್ ಆಟಗಾರ ಯೂಸೂಫ್ ಪಠಾಣ್ ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಗಳಿಗೆ ವಿದಾಯ ಹೇಳಿದ್ದಾರೆ.
ಈ ಇಬ್ಬರೂ ಕೂಡ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ನಿವೃತಿ ಘೋಷಿಸಿದ್ದಾರೆ. ಇನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಆಟಗಾರರಲ್ಲೊಬ್ಬರಾಗಿರುವ ಯೂಸೂಫ್ ಪಠಾಣ್ 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿ ಮಾಡಿದ್ದರು. ಏಕದಿನ ಮತ್ತು ಟಿ20 ಪಂದ್ಯಗಳನ್ನು 2012ರಲ್ಲಿ ಕೊನೆಯದಾಗಿ ಆಡಿದ್ದರು.
ಕ್ರಿಕೆಟ್ ಇತಿಹಾಸದಲ್ಲಿ ಯೂಸುಪ್ ಪಠಾಣ್ ಅವರು 810 ರನ್ ಬಾರಿಸಿದ್ದಾರೆ. ಇದಕ್ಕಾಗಿ 57 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. 123 ಯೂಸುಫ್ ಅವರ ಬ್ಯಾಟ್ ನಿಂದ ಬಂದ ಗರಿಷ್ಠ ಮೊತ್ತವಾಗಿದೆ. ಬೌಲಿಂಗ್ ನಲ್ಲೂ ಮಿಂಚಿದ್ದು 33 ವಿಕೆಟ್ ಗಳನ್ನು ಪಡೆದಿದ್ದಾರೆ. ಇನ್ನು 22 ಟಿ20 ಪಂದ್ಯಗಳನ್ನಾಡಿರುವ ಅವರು 236 ರನ್ ಬಾರಿಸಿದ್ದಾರೆ.
ಇನ್ನು ವಿನಯ್ ಕುಮಾರ್ ಅವರು 2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು 31 ಏಕದಿನ ಪಂದ್ಯಗಳನ್ನಾಡಿದ್ದಾರೆ. ತಾನು ಆಡಿದ ಪಂದ್ಯಗಳಲ್ಲಿ 48 ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು 9 ಟಿ20 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದರು.