ಅಹಮದಾಬಾದ್, ಮಾ.06 (DaijiworldNews/MB): ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನ ಪಂದ್ಯದಲ್ಲಿ ಇಂಗ್ಲೆಂಡ್ ಭಾರತದ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಅವರ ಚೆಂಡಿನ ದಾಳಿಗೆ ತತ್ತರಿಸಿದ್ದು 135 ರನ್ಗೆ ಆಲ್ ಔಟ್ ಆಗಿದೆ.
ಭಾರತ ಇನ್ನಿಂಗ್ಸ್ ಹಾಗೂ 25 ರನ್ಗಳಿಂದ 4ನೇ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಜಯಗಳಿಸಿ ಸರಣಿಯನ್ನು 3-1ರ ಅಂತರದಲ್ಲಿ ವಶಕ್ಕೆ ಪಡೆದಿದೆ. ಭಾರತ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 3-1ರಲ್ಲಿ ಜಯಗಳಿಸುವ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ನ ಫೈನಲ್ಗೆ ಪ್ರವೇಶಿಸಿದೆ.
ಇಂಗ್ಲೆಂಡ್ ದಾಂಡಿಗರನ್ನು ಕಂಗಾಲಾಗಿಸಿದ ಭಾರತದ ಸ್ಪಿನ್ ದ್ವಯರಾದ ಅಕ್ಷರ್ ಪಟೇಲ್ ಮತ್ತು ಅಶ್ವಿನ್ ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟರು. ಅಕ್ಷರ್ ಪಟೇಲ್ 5 ವಿಕೆಟ್ (24 ಓವರ್, 6 ಮೇಡನ್ ಓವರ್) ಪಡೆದರೆ, ರವಿಚಂದ್ರನ್ ಅಶ್ವಿನ್ 5 ವಿಕೆಟ್ ಪಡೆದಿದ್ದಾರೆ.
ಎರಡನೇ ದಿನ 294 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ತನ್ನ ಬ್ಯಾಟಿಂಗ್ ಮುಂದುವರಿಸಿ 365 ರನ್ ಗಳಿಸಿತ್ತು. ಭಾರತದ ಸುಂದರ್ 96 ರನ್ (174 ಎಸೆತ, 10 ಬೌಡಂರಿ, 1 ಸಿಕ್ಸರ್) ರನ್ ಗಳಿಸುವ ಮೂಲಕ ತಂಡಕ್ಕೆ ರನ್ ಹೆಚ್ಚಿಸಲು ಸಹಾಯವಾಗಿದ್ದಾರೆ.