ನವದೆಹಲಿ, ಮಾ. 08 (DaijiworldNews/SM): ಐಸಿಸಿ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಎಂದೇ ಪರಿಗಣಿಸಲ್ಪಡುವ ಚುಟುಕು ಕ್ರಿಕೆಟ್ ಐಪಿಎಲ್ ನ 14ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಏಪ್ರಿಲ್ 9ರಿಂದ ಮೇ 30ರ ತನಕ ನಡೆಯಲಿದೆ. ಕಳೆದ ವರ್ಷ ವಿದೇಶದಲ್ಲಿ ನಡೆದಿದ್ದ ಟೂರ್ನಿ ಈ ಬಾರಿ ಮತ್ತೆ ತವರಿನಲ್ಲೇ ಆಯೋಜಿಸುವ ಮೂಲಕ ಮೆರುಗು ಹೆಚ್ಚಿಸುವ ಸಾಧ್ಯತೆ ಇದೆ.
ಏಪ್ರಿಲ್ 9 ರಿಂದ ಭಾರತದ ಆರು ವಿವಿಧ ಸ್ಥಳಗಳಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಪ್ರಕಟಿಸಿದೆ. ಈ ಬಾರಿಯೂ ಕೂಡ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪದರ್ಪಣೆ ನಡೆಸಲಿದೆ. ಚೆನ್ನೈನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ ತಂಡವನ್ನು ಮುಂಬೈ ಎದುರಿಸಲಿದೆ. "ಸುಮಾರು ಎರಡು ವರ್ಷಗಳ ನಂತರ, ಐಪಿಎಲ್ ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ನಗರಗಳಲ್ಲಿ ನಡೆಯಲಿದೆ" ಎಂದು ಬಿಸಿಸಿಐ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.
14 ನೇ ಆವೃತ್ತಿಯ ಫೈನಲ್ ಪಂದ್ಯವು ಮೇ 30 ರಂದು ಆಯೋಜಿಸಲಾಗಿದ್ದು, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
14 ನೇ ಆವೃತ್ತಿಯ ಯಾವ ತಂಡಗಳ ನಡುವೆ ಯಾವಾಗ ಪಂದ್ಯಗಳು ನಡೆಯಲಿವೆ? ಇಲ್ಲಿದೆ ಸಂಪೂರ್ಣ ವಿವರ: