ಅಹಮದಾಬಾದ್, ಮಾ. 14 (DaijiworldNews/SM): ಇಂಗ್ಲೆಂಡ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳಿಂದ ಗೆಲುವು ದಾಖಲಿಸುವ ಮೂಲಕ ಮೊದಲ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡಿದೆ.
ಟಾಸ್ ಗೆದ್ದ ಭಾರತ ಇಂಗ್ಲೆಂಡ್ ತಂಡಕ್ಕೆ ಮೊದಲು ಬ್ಯಾಟೀಂಗ್ ಗೆ ಆಹ್ವಾನ ನೀಡಿತು. ಇಂಗ್ಲೆಂಡ್ ತಂಡ ಇಪ್ಪತ್ತು ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 164 ರನ್ ಗಳಿಸಿತು. ಆರಂಭಿಕ ಆಟಗಾರ ರೋಯ್ 46, ಮಲನ್ 24, ಮಾರ್ಗನ್ 28, ಸ್ಟೋಕ್ಸ್ 24 ರನ್ ಗಳ ಕೊಡುಗೆ ನೀಡಿದರು.
ಇಂಗ್ಲೆಂಡ್ ನೀಡಿದ ಗುರಿ ಬೆನ್ನಟ್ಟಿದ ಟೀಂ-ಇಂಡಿಯಾ 17.5 ಓವರ್ ಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 166 ರನ್ ಗಳಿಸಿ ಗೆಲುವಿನ ನಗೆ ಚೆಲ್ಲಿತು. ಭಾರತ ಪರ ಇಶಾನ್ ಕಿಶಾನ್ 56, ವಿರಾಟ್ ಕೊಹ್ಲಿ 73 ರನ್ ಗಳಿಸಿ ಗೆಲುವಿನ ರುವಾರಿಗಳೆಣಿಸಿಕೊಂಡರು.