ನವದೆಹಲಿ, ಎ.03 (DaijiworldNews/MB) : ಐಪಿಎಲ್ 2021 ರ ಆರಂಭಕ್ಕೆ ಇನ್ನು ಒಂದು ವಾರವಿರುವಾಗಲೇ ಕಳೆದ ಬಾರಿಯ ರನರ್ಸ್ ಅಪ್ ಆದ ಡೆಲ್ಲಿ ಕ್ಯಾಪಿಟಲ್ಗೆ ಭಾರೀ ಹಿನ್ನಡೆ ಕಂಡು ಬಂದಿದೆ. ಬೌಲಿಂಗ್ ಆಲ್ ರೌಂಡರ್ ಅಕ್ಷರ್ ಪಟೇಲ್ಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಮಾರ್ಚ್ 28 ರಂದು ಅವರು ನೆಗೆಟಿವ್ ವರದಿಯೊಂದಿಗೆ ತಂಡದ ಹೋಟೆಲ್ಗೆ ಪ್ರವೇಶ ಪಡೆದಿದ್ದರು. ಎರಡನೇ ಬಾರಿಗೆ ಅವರ ಕೊರೊನಾ ಪರೀಕ್ಷೆ ನಡೆಸಿದಾಗ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್, ''ಪ್ರಸ್ತುತ ಅಕ್ಷರ್ ಪಟೇಲ್ ಪ್ರತ್ಯೇಕವಾಗಿದ್ದಾರೆ. ವೈದ್ಯಕೀಯ ತಂಡವು ಅವರ ಆರೈಕೆ ಮಾಡುತ್ತಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಹಾರೈಸುತ್ತೇವೆ'' ಎಂದು ತಿಳಿಸಿದೆ.
ಏಪ್ರಿಲ್ 9 ರಂದು ಈ ಸಾಲಿನ ಐಪಿಎಲ್ ಆರಂಭವಾಗಲಿದ್ದು ಏಪ್ರಿಲ್ 10 ರಂದು ಮುಂಬೈನಲ್ಲಿ ನಡೆಯಲಿರುವ ಆರಂಭಿಕ ಮುಖಾಮುಖಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ಮೂರು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಕೋಲ್ಕತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್ಮನ್ ನಿತೀಶ್ ರಾಣಾ ಬಳಿಕ ಕೊರೊನಾ ಸೋಂಕು ತಗುಲಿದ 2021ರ ಐಪಿಎಲ್ ಟೂರ್ನಿಯ ಎರಡನೇ ಆಟಗಾರ ಅಕ್ಷರ್ ಪಟೇಲ್ ಆಗಿದ್ದಾರೆ.