ಚೆನ್ನೈ, ಎ.04 (DaijiworldNews/PY): ಆರ್ಸಿಬಿ ಆಟಗಾರ ದೇವದತ್ ಪಡಿಕ್ಕಲ್ ಅವರಿಗೆ ರವಿವಾರ ಕೊರೊನಾ ಸೋಂಕು ದೃಢಪಟ್ಟಿದೆ.
ಪಡಿಕ್ಕಲ್ ಅವರಿಗೆ ಕೊರೊನಾ ಸೋಂಕು ಇರುವುದು ರವಿವಾರ ತಿಳಿದುಬಂದಿದೆ. ಈ ಹಿನ್ನೆಲೆ ಅವರು ಆರ್ಸಿಬಿ ಹಾಗೂ ಮುಂಬೈ ನಡುವೆ ನಡೆಯುವ ಪಂದ್ಯಕ್ಕೆ ಗೈರಾಗುವ ಅನುಮಾನವಿದೆ.
ಸದ್ಯ ಪಡಿಕ್ಕಲ್ ಅವರನ್ನು ಉಳಿದ ಆಟಗಾರರಿಂದ ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ಹಿನ್ನೆಲೆ ಎಲ್ಲಾ ಅಟಗರರು ಏಳು ದಿನಗಳ ಕಾಲ ಪ್ರತ್ಯೇಕ ವಾಸದಲ್ಲಿರುವ ಕಡ್ಡಾಯ. ಈ ಹಂತದಲ್ಲಿ ಆಟಗಾರರು ಕೊರೊನಾ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಲ್ಲಿ ಮಾತ್ರವೇ ಹೋಟೆಲ್ ಕೊಠಡಿಯಿಂದ ಹೊರಗೆ ಬಂದು ಅಭ್ಯಾಸದಲ್ಲಿ ಪಾಲ್ಗೊಳ್ಳು ಅವಕಾಶವಿರುತ್ತದೆ.
ಎಪ್ರಿಲ್ 9ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ತಂಡ ಮುಂಬೈ ಇಂಡಿಯನ್ಸ್ ಅನ್ನು ಎದುರಿಸಲಿದೆ.
ದೇವದತ್ ಪಡಿಕ್ಕಲ್ ಕೊರೊನಾ ಸೋಂಕು ತಗುಲಿದ ಮೂರನೇ ಆಟಗಾರರಾಗಿದ್ದಾರೆ. ಇದಕ್ಕೂ ಮುನ್ನ ಕೋಲ್ಕತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್ಮನ್ ನಿತೀಶ್ ರಾಣಾ ಡೆಲ್ಲಿ ಕ್ಯಾಪಿಟಲ್ಸ್ನ ಅಕ್ಷರ್ ಪಟೇಲ್ಗೆ ಕೊರೊನಾ ಸೋಂಕು ದೃಢಪಟ್ಟಿತ್ತು.
ನಿತೀಶ್ ರಾಣಾ ಅವರಿಗೆ ನೆಗೆಟಿವ್ ವರದಿ ಬಂದ ಬಳಿಕ ಅವರು ತಂಡಕ್ಕೆ ಮರು ಸೇರ್ಪಡೆಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ನ ಮೊದಲ ಪಂದ್ಯದಿಂದ ಅಕ್ಷರ್ ಪಟೇಲ್ ಅವರು ಹೊರಗುಳಿಯಲಿದ್ದಾರೆ.