ದೆಹಲಿ, ಮೇ 01 (DaijiworldNews/SM): ಇಲ್ಲಿನ ಅರುಣ್ ಜೆಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪೊಲಾರ್ಡ್ ಅವರ ಏಕಾಂಗಿ ಹೋರಾಟದಿಂದ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಆರು ವಿಕೆಟ್ ಗಳ ನಷ್ಟಕ್ಕೆ 218 ರನ್ ಗಳಿಸಿತು.
ಚೆನ್ನೈ ನೀಡಿದ ಗುರಿ ಬೆನ್ನಟ್ಟಿದ ಮುಂಬೈಗೆ ನಾಯಕ ರೋಹಿತ್ ಹಾಗೂ ಡಿ ಕಾಕ್ ಅಲ್ಪ ಭರವಸೆ ಮೂಡಿಸಿದರಾದರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಬಳಿಕ ಮೈದಾನಕ್ಕಿಳಿದ ಪೊಲಾರ್ಡ್ ಅಬ್ಬರಿಸಿದರು. ಬೌಂಡರಿ ಸಿಕ್ಸರ್ ಗಳ ಮಳೆ ಸುರಿಸಿದರು. ಅಂತಿಮ ಓವರ್ ನ ಅಂತಿಮ ಎಸೆತದ ತನಕ ಕುತೂಹಲ ಮೂಡಿದ್ದ ಪಂದ್ಯದಲ್ಲಿ ಮುಂಬೈ ಭರ್ಜರಿ ಭಯಬೇರಿಗಳಿಸಿತು.