ನವದೆಹಲಿ, ಮೇ. 08 (DaijiworldNews/HR): ಮಾಜಿ ಹಾಕಿ ಆಟಗಾರ, ಒಲಿಂಪಿಕ್ ಚಿನ್ನದ ಪದಕ ವಿಜೇತ ರವೀಂದರ್ ಪಾಲ್ ಸಿಂಗ್ (65) ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರವೀಂದರ್ ಪಾಲ್ ಸಿಂಗ್ ಅವರಿಗೆ ಕೊರೊನಾ ಪಾಸಿಟಿವ್ ಆದ ಹಿನ್ನಲೆಯಲ್ಲಿ ಏಪ್ರಿಲ್ 24 ಹರಂದು ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿದ್ದು, ಸೋಂಕಿನಿಂದ ಗುಣಮುಖರಾಗಿ ಕಳೆದ ಗುರುವಾರ ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು, ಆದರೆ ಶುಕ್ರವಾರ ಮತ್ತೆ ಅವರ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಿದ್ದು ಕೂಡಲೇ ವೆಂಟಿಲೇಟರ್ ಅಳವಡಿಲಾಯಿತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
1979 ರ ಜೂನಿಯರ್ ವಿಶ್ವಕಪ್ನಲ್ಲಿ ಆಡಿದ್ದ ಅವರು, ಹಾಕಿಯಿಂದ ನಿವೃತ್ತಿಯಾದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೌಕರಿಯಿಂದಲೂ ಸ್ವಯಂಪ್ರೇರಿತರಾಗಿ ನಿವೃತ್ತರಾದರು.
ಇನ್ನು 1980,1983ರಲ್ಲಿ ಕರಾಚಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತು ಹಾಂಕಾಂಗ್ನಲ್ಲಿ ನಡೆದ ಸಿಲ್ವರ್ ಜುಬಿಲಿ 10 ರಾಷ್ಟ್ರಗಳ ಕಪ್, 1982 ರಲ್ಲಿ ಮುಂಬೈನಲ್ಲಿ ನಡೆದ ವಿಶ್ವಕಪ್ ಹಾಗೂ ಕರಾಚಿಯಲ್ಲಿ ನಡೆದ ಏಷ್ಯಾಕಪ್ ಸೇರಿದಂತೆ ಇತರ ಪಂದ್ಯಾವಳಿಗಳಲ್ಲಿ ರವೀಂದರ್ ಪಾಲ್ ಸಿಂಗ್ ಭಾರತವನ್ನು ಪ್ರತಿನಿಧಿಸಿದ್ದರು ಎಂದು ವರದಿಯಾಗಿದೆ.